HEALTH TIPS

ಖಾಸಗಿ ಸಂಸ್ಥೆಗಳ ಪ್ರಶಸ್ತಿ: ಅನುಮೋದನೆ ಕಡ್ಡಾಯ

              ವದೆಹಲಿ: ಐಎಎಸ್‌, ಐಪಿಎಸ್‌ ಮತ್ತು ಭಾರತೀಯ ಅರಣ್ಯ ಸೇವೆ (ಎಎಫ್‌ಎಸ್‌) ಅಧಿಕಾರಿಗಳು ಖಾಸಗಿ ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಸ್ವೀಕರಿಸುವುದಕ್ಕೂ ಮುನ್ನ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.

                ಸಕ್ಷಮ ಪ್ರಾಧಿಕಾರ ಅನುಮೋದಿಸಿದ ನಂತರ ಪ್ರಶಸ್ತಿಗಳನ್ನು ಸ್ವೀಕರಿಸಬಹುದು. ಆದರೆ, ಪ್ರಶಸ್ತಿಯು ನಗದು ಒಳಗೊಂಡಿರಬಾರದು ಎಂಬ ನಿಬಂಧನೆಯನ್ನು ವಿಧಿಸಿದೆ.

                 ಈ ಸಂಬಂಧ ಸಿಬ್ಬಂದಿ ಸಚಿವಾಲಯವು ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

                   ಇಂತಹ ಸೂಚನೆಗಳು ಜಾರಿಯಲ್ಲಿದ್ದರೂ, ಕೆಲ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಖಾಸಗಿ ಸಂಘ-ಸಂಸ್ಥೆಗಳು ನೀಡುವ ಪುರಸ್ಕಾರಗಳನ್ನು ಸ್ವೀಕರಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries