ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಿಂದ ಮಾತಾ ಶಾಕಾಂಭರಿ ದೇವಿ ಸಿದ್ದಪೀಠಕ್ಕೆ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ನಗರಕ್ಕೆ ಆಗಮಿಸಿದ ವೈಷ್ಣವ್ ಇಲ್ಲಿನ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂಗಳ ಯಾತ್ರಾಸ್ಥಳವಾದ ಸಿದ್ದಪೀಠಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿರ್ಮಾಣದ ಯೋಜನೆಗೆ ಸಮೀಕ್ಷೆಯನ್ನು ಆರಂಭಿಸಲಾಗಿದ್ದು, 81 ಕಿಲೋಮಿಟರ್‌ಗಳ ಹಳಿ ರಚನೆಯ ನಕ್ಷೆಯನ್ನು ಸಿದ್ದಪಡಿಸಲು ₹ 2ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸುತ್ತಮುತ್ತಲಿನ ಜಿಲ್ಲೆಗಳ ಜೊತೆಗೆ ಇತರ ರಾಜ್ಯಗಳ ಭಕ್ತರು ಸಿದ್ಧಪೀಠಕ್ಕೆ ಭೇಟಿ ನೀಡುತ್ತಾರೆ ಎಂದರು.
ಸಹರಾನ್‌ಪುರದ ಗೋವಿಂದ ನಗರದಲ್ಲಿ ರೈಲ್ವೆ ಇಲಾಖೆ ನಿರ್ಮಿಸಿದ ರೈಲ್ವೆ ಪಾರ್ಕ್ ಮತ್ತು ಶೇಖ್‌ಪುರ ಕಡಿಮ್‌ನಲ್ಲಿ ರೈಲ್ವೆ ಮೇಲ್ಸೇತುವೆಯನ್ನು ಸಚಿವರು ಉದ್ಘಾಟಿಸಿದರು.