HEALTH TIPS

ಕೇಂದ್ರ, ರಾಜ್ಯ ಸರ್ಕಾರಗಳ ಜಂಟಿ ಕ್ರಮ ಮೀನುಗಾರಿಕಾ ವಲಯದ ಉತ್ತೇಜನಕ್ಕೆ ಸಹಕಾರಿ-ಕೇಂದ್ರ ಸಚಿವ ಪರುಷೋತ್ತಮ ರೂಪಲಾ ಅಭಿಮತ

   

                 ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಕಾರದೊಂದಿಗೆ ರಾಜ್ಯದ ಮೀನುಗಾರಿಕಾ ಕ್ಷೇತ್ರವನ್ನು ಬಲಪಡಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಶ್ರೀ ಪರ್ಶೋತ್ತಮ್ ರೂಪಾಲಾ ಹೇಳಿದರು. 

           ಅವರು ಕಾಸರಗೋಡು ನಗರಸಭಾ ಟೌನ್‍ಹಾಲ್‍ನಲ್ಲಿ ನಡೆದ ಸಾಗರ ಪರಿಕ್ರಮ ಯಾತ್ರೆಯ ಏಳನೇ ಹಂತದ ಫಲಾನುಭವಿಗಳ ಸಂಗಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇರಳ ಮೀನುಗಾರಿಕಾ ವಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮನವಿ, ಸಲಹೆಗಳನ್ನು ಕೇಂದ್ರ ಪರಿಗಣಿಸಲಿದೆ. ಮೀನುಗಾರಿಕಾ ಕ್ಷೇತ್ರದ ಸವಾಲುಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚರ್ಚಿಸಲು ವಿವಿಧ ರಾಜ್ಯಗಳ ಮೀನುಗಾರಿಕೆ ಸಚಿವರೊಂದಿಗೆ ಮಹಾಬಲಿ ಪುರಂನಲ್ಲಿ ಎರಡು ದಿನಗಳ ಚರ್ಚೆ ನಡೆಸಲಾಗುವುದು. ಮುಂದಿನ  ಮೂರು ದಿನಗಳಲ್ಲಿ ಕೇರಳದ ಮೀನುಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಅಧ್ಯಯನ ನಡೆಸಿ, ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 

             ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ರಾಜ್ಯ ಸಚಿವ ಡಾ. ಎಲ್ ಮುರುಗನ್ ಮಾತನಾಡಿ, ಎಲ್ಲಾ ಆಧುನಿಕ ತಂತ್ರಜ್ಞಾನದೊಂದಿಗೆ ಕೇಂದ್ರ ಸರ್ಕಾರದ ಕನಸಿನ ಯೋಜನೆಯನ್ವಯ ಕಾರ್ಯಾಚರಿಸುತ್ತಿರುವ ಐದು ಬಂದರುಗಳಲ್ಲಿ ಕೇರಳದ ಕೊಚ್ಚಿ ಒಂದಾಗಿದೆ.  ಸಾಗರ ಪರಿಕ್ರಮ ಯಾತ್ರೆ ಇನ್ನೂ 4000 ಕಿ.ಮೀ ಸಂಚರಿಸಬೇಕಾಗಿದೆ. ಮೀನು ರಫ್ತಿನಲ್ಲಿ ಪ್ರಗತಿ ಸಾಧಿಸಲು ಸಮುದ್ರದ ಮಕ್ಕಳೇ ಸಹಕಾರಿಯಾಗಿದ್ದು, ಅವರ ಹಿತ ಕಾಯುವುದು ಸರ್ಕಾರದ ಧ್ಯೇಯವಾಗಿದೆ ಎಂದು ತಿಳಿಸಿದರು.

         ಸಾಗರ ಪರಿಕ್ರಮ ಯಾತ್ರೆಗೂ ಮುನ್ನ ಮೀನುಗಾರಿಕಾ ಇಲಾಖೆ ವತಿಯಿಂದ  47 ಮಂಡಳಗಳಲ್ಲಿ ಕರಾವಳಿ ಜನರ ಸಮಸ್ಯೆಗಳ ಅಧ್ಯಯನಕ್ಕಾಗಿ ಕರಾವಳಿ ಸಭೆ ನಡೆಸಿ ಮೀನುಗಾರರು ಹಾಗೂ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂದು ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ. 

            40 ಕೋಟಿ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದೆ ಕಾಸರಗೋಡು ಚೆರುವತ್ತೂರು ಮೀನುಗಾರಿಕೆ ಬಂದರು, ಚೆರುವತ್ತೂರುಮೀನುಗಾರಿಕೆ ಮತ್ತು ಸಂಸ್ಕøತಿ ಸಚಿವ ಸಾಜಿ ಚೆರಿಯನ್ ಅವರು ಮೂರು ಮೀನುಗಾರಿಕೆಗೆ 520 ಲಕ್ಷ ರೂ.ಗಳ ಯೋಜನಾ ದಾಖಲೆ ಮತ್ತು ನೀಲೇಶ್ವರಂ ಮೀನುಗಾರಿಕಾ ಕೇಂದ್ರ ಸೇರಿದಂತೆ ನಾಲ್ಕು ಮೀನುಗಾರಿಕೆ ಅಭಿವೃದ್ಧಿಗೆ 2275 ಲಕ್ಷ ರೂ.ಗಳ ಯೋಜನಾ ದಾಖಲೆಯನ್ನು ಕೇಂದ್ರ ಸಚಿವ ಪರುಶೋತ್ತಮ್ ರೂಪಾಲಾ ಅವರಿಗೆ ಹಸ್ತಾಂತರಿಸಿದರು. ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್,  ಶಾಸಕ ಎನ್.ಎ  ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಭಾಶೇಖರ್, ಎನ್‍ಎಫ್‍ಡಿಬಿ ಸದಸ್ಯ ರಾಧಾಕೃಷ್ಣನ್, ರವಿಶತಂತ್ರಿ ಕುಂಟಾರು,  ಮೀನುಗಾರರ ಸಂಘದ ಪ್ರತಿನಿಧಿಗಳಾದ ವಿ.ವಿ.ರಮೇಶನ್, ಕೆ.ಕೆ.ಬಾಬು, ಎಂ.ಆರ್.ಶರತ್, ಎ. ಅಂಬುಞÂ, ಮುತಾಲಿಬ್ ಪಾರಕಟ್ಟ ಉಪಸ್ಥಿತರಿದ್ದರು. ಎನ್‍ಎಫ್‍ಡಿಬಿ ಮುಖ್ಯ ಕಾರ್ಯನಿರ್ವಾಹಕ ಡಾ. ಸಿ ಸುವರ್ಣ ಸ್ವಾಗತಿಸಿದರು. ಮೀನುಗಾರಿಕೆ ಪ್ರಾದೇಶಿಕ ನಿರ್ದೇಶಕ ಎನ್.ಎಸ್.ಶ್ರೀಲು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries