ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನೇತೃತ್ವ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ 'ಗಡಿನಾಡ ಕಲಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜೂ. 3ಮತ್ತು 4ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. 3ರಂದು ಬೆಳಗ್ಗೆ 10ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಸಮಾರಂಭ ಉಧ್ಘಾಟಿಸಿ ಆಶೀರ್ವಚನ ನೀಡುವರು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಅಧ್ಯಕ್ಷತೆ ವಹಿಸುವರು.
ಕನ್ನಡ ಹೋರಾಟಗಾರ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಶಿವರಾಮ ಕಾಸರಗೋಡು ಹಾಗೂ ಸಿರಿಬಾಗಿಲು ರಾಮಕೃಷ್ಣ ಮಯ್ಯ ಉಪಸ್ಥಿತರಿರುವರು.
11ಕ್ಕೆ ಪುತ್ತಿಗೆ ರಾಮಕೃಷ್ಣ ಜೋಯಿಸ ವಿರಚಿತ ಶ್ರೀ ರಾಮ ನಿಜ ಪಟ್ಟಾಭಿಷೇಕ ಪ್ರಸಂಗದ ಅಗ್ನಿ ಪರೀಕ್ಷೆಯ ಆಯ್ದ ಭಾಗವನ್ನು ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಪಡಿಸುವರು. ಮಧ್ಯಾಹ್ನ 2.30ರಿಂದ ಶ್ರೀಹರಿ ಭಟ್ ಅವರಿಂದ ಗಮಕ ವಾಚನ , 4 ರಿಂದ ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆ ಇವರಿಂದ ಹರಿಕಥೆ, ನಂತರ ನೃತ್ಯೋಪಾಸನಾ ಕಲಾಕೇಂದ್ರ(ರಿ.) ಪುತ್ತೂರು ಅವರು ಪ್ರಸ್ತುತ ಪಡಿಸುವ "ನೃತ್ಯೋsಹಂ" ನಡೆಯಲಿದೆ.
4ರಂದು ಬೆಳಗ್ಗೆ ಗಡಿನಾಡ ಕವಿ ರಾಧಾಕೃಷ್ಣ ಕೆ, ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ, ಕವನ ಗೋಷ್ಠಿ, ಅವಲೋಕನ ನಡೆಯಲಿದೆ. ಸೀತಾಲಕ್ಷ್ಮಿ ವರ್ಮ, ವಿಟ್ಲ ಗೋಷ್ಠಿ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕ ಅಧ್ಯಕ್ಷ ಯಸ್.ವಿ.ಭಟ್, ಹಿರಿಯ ಪತ್ರಕರ್ತ ಮಾಲಾರು ಜಯರಾಮ ರೈ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 2ರಿಂದ ಗಡಿನಾಡನ ಕಲೆ-ಸಾಹಿತ್ಯ-ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಕೀರ್ತಿಶೇಷ ರ ಕೊಡುಗೆಗಳ ಬಗ್ಗೆ ವಿಚಾರ ಸಂಕಿರಣ ನಡೆಯುವುದು. ಪ್ರಸಂಗಕರ್ತ ಶ್ರೀಧರ ಡಿ.ಯಸ್. ಅಧ್ಯಕ್ಷತೆ ವಹಿಸುವರು. ಡಾ.ರಾಧಾಕೃಷ್ಣ ಬೆಳ್ಳೂರು, ಜಯಲಕ್ಷ್ಮಿ ಕಾರಂತ, ಯೋಗೀಶ್ ರಾವ್ ಚಿಗುರುಪಾದೆ, ಕಾರ್ತಿಕ್ ಪಡ್ರೆ, ರಾಜಾರಾಮ ರಾವ್ ಮಿಯಪದವು ಇವರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ದರ್ಮದರ್ಶಿ ಹರಿಕೃಷ್ಣ ಪುನರೂರು ಅದ್ಯಕ್ಷತೆ ವಹಿಸುವರು. ಶಾಸಕ ಎಂ.ಎ. ನೆಲ್ಲಿಕ್ಕುನ್ನು, ಕೆನರಾ ಬೇಂಕ್ ನ ಜನರಲ್ ಮೆನೇಜರ್ ಮುರಳಿ ಕೃಷ್ಣಪ್ರಿಯ, ಸಿಂಡಿಕೇಟ್ ಬೇಂಕ್ ನ ವಿಶ್ರಾಂತ ಡಿ.ಜಿ.ಯಂ. ನರಸಿಂಹ ಮೂರ್ತಿ ತೋನ್ಸೆ. ಉದ್ಯಮಿ ಗೋವಿಂದ ಭಟ್ ದಿವಾಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ವಿದ್ವಾನ್ ಬಾಬು ರೈ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪೂಕಳ ಲಕ್ಷ್ಮೀನಾರಾಯಣ ಭಟ್ ಇವರಿಗೆ ಗಡಿನಾಡ.ಸಿರಿ- ಸಿರಿಬಾಗಿಲು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 6ಕ್ಕೆ ಪ್ರಸಿದ್ದ ಕಲಾವಿದರಿಂದ ಮಧೂರು ಕ್ಷೇತ್ರದ ಚಾರಿತ್ರಿಕ ಕತೆ "ಮಧುಪುರ ಮಹಾತ್ಮೆ "" ಯಕ್ಷಗಾನ ಬಯಲಾಟ ನಡೆಯಲಿದೆ.