ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮಹಾ ಚಂಡಿಕಾ ಯಾಗದ ಲೆಕ್ಕ ಪತ್ರ ಮಂಡನೆ ಹಾಗೂ ಅವಲೋಕನ ಸಭೆ ಚಂಡಿಕಾಯಾಗ ಸಮಿತಿ ನೇತೃತ್ವದಲ್ಲಿ ಪಾಂಗೋಡು ಕ್ಷೇತ್ರದಲ್ಲಿ ನಡೆಯಿತು.
ಯಾಗ ಸಮಿತಿ ಅಧ್ಯಕ್ಷ ಕೆ ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಯಾಗ ಸಮಿತಿ ಕೋಶಾಧಿಕಾರಿ ಕಮಲಾಕ್ಷ ಅಣಂಗೂರು ಲೆಕ್ಕ ಪತ್ರ ಮಂಡಿಸಿದರು, ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಮಹಿಳಾ ಸಮಿತಿ ಸಂಚಾಲಕಿ, ನಿಕಟಪೂರ್ವ ಮಹಿಳಾ ಜಿಲ್ಲಾಧ್ಯಕ್ಷೆ ಉಷಾಕಿರಣ್, ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್, ಪ್ರದೀಪ್ ಬೇಕಲ್ ಹೊಸದುರ್ಗ ಅನಿಸಿಕೆ ವ್ಯಕ್ತಪಡಿಸಿದರು.
ಕಮಲಾಕ್ಷ ಅಣಂಗೂರ್, ಬಟ್ಟರಾಜ ನಾಗರಕಟ್ಟೆ, ಕ್ಷೇತ್ರ ನಿರ್ವಾಹಕರಾದ ನವೀನ್ ನಾಯ್ಕ್ ಪಾಂಗೋಡ್, ಹರೀಶ್ ಕೂಡ್ಲು ಇವರನ್ನು ಯಾಗ ಸಮಿತಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಪ್ರದೀಪ್ ನಾಯಕ್, ಪ್ರಜ್ವಲ್ ನಾಯ್ಕ್,ವಸಂತ ಕೆರೆಮನೆ ಉಪಸ್ಥಿತರಿದ್ದರು.
ಮಹಾಚಂಡಿಕಾಯಾಗದಲ್ಲಿ ಉಳಿಕೆಯಾದ ಒಟ್ಟು 90227ರೂ. ಮೊತ್ತವನ್ನು, ಕ್ಷೇತ್ರ ಸಮಿತಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಯಾಗ ಸಮಿತಿಯನ್ನು ವಿಸರ್ಜಿಸಲಾಯಿತು. ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್ ಗೌರವ ಸಲ್ಲಿಸಿದರು. ಜಗನ್ನಾಥ ಅಣಂಗೂರು ವಂದಿಸಿದರು.