ನವದೆಹಲಿ : ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಹೆಚ್ಚುತ್ತಿದೆ. ಇದರಲ್ಲಿ ಅಮೆರಿಕ, ಜರ್ಮನಿಯಂತಹ ಭೂಗೋಳದ ಉತ್ತರ ಭಾಗದಲ್ಲಿರುವ ದೇಶಗಳ ಪಾಲು ಶೇ 90ರಷ್ಟಿದೆ. 2050ರ ವೇಳೆಗೆ ಹವಾಮಾನ ಬದಲಾವಣೆ ಗುರಿ ತಲುಪಲು ಭಾರತದಂತಹ ದೇಶಗಳಿಗೆ ಪರಿಹಾರ ರೂಪದಲ್ಲಿ ಈ ದೇಶಗಳು ₹ 1,403 ಲಕ್ಷ ಕೋಟಿಯನ್ನು ನೀಡಬೇಕಾಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ.