HEALTH TIPS

ದಿ ಕೇರಳ ಸ್ಟೋರಿ ಚಿತ್ರತಂಡದಿಂದ ಹೊಸ ಸಿನಿಮಾ ಘೋಷಣೆ​; ತೆರೆಗೆ ರಿಯಲ್​ ಸ್ಟೋರಿ 'ಬಸ್ತರ್​'

            ಮುಂಬೈಈ ವರ್ಷ ತೆರೆಕಂಡು ಪ್ರೇಕ್ಷಕರಿಂ ಭರ್ಜರಿ ರೆಸ್ಪಾನ್ಸ್​ ಪಡೆದಿದ್ದ, ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶದ ಸುದೀಪ್ತೋ ಸೇನ್​ ಹಾಗೂ ನಿರ್ಮಾಪಕ ವಿಫುಲ್​ ಶಾ ಈಗ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ.


                   ಈ ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ ಬಸ್ತರ್​ ಎಂದು ಹೆಸರಿಸಲಾಗಿದೆ.

                  ಈ ಬಾರಿಯೂ ಕೂಡ ಈ ಜೋಡಿ ನೈಜ ಘಟನೆ ಆಧಾರಿತ ಘಟನೆಯಕುರಿತು ಚಿತ್ರ ಮಾಡಲಿದೆ.

                ವಿಪುಲ್​ ಶಾ ಅವರ ಸನ್​ಶೈನ್​ ಪಿಕ್ಷರ್ಸ್​ ಮೂಲಕ ಚಿತ್ರವನ್ನು ನಿರ್ಮಿಸಲಾಗುವುದು ಎಂದು ಟ್ವೀಟ್​ ಮಾಡಿ ತಿಳಿಸಲಾಗಿದೆ. ಬಸ್ತರ್ ಚಿತ್ರದ ಪೋಸ್ಟರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಏಪ್ರಿಲ್​ 5, 2024ರಂದು ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.

                   ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ಜಿಹಾದ್​ ಘಟನೆಗಳನ್ನು ಆಧರಿಸಿ ದಿ ಕೇರಳ ಸ್ಟೋರಿ ಚಿತ್ರ ಸಿದ್ದಗೊಂಡಿತ್ತು. ಸಿನಿಮಾ ಬಿಡುಗಡೆಯಾದ ನಂತರ ಪರ-ವಿರೋಧ ವ್ಯಕ್ತವಾಗಿದ್ದವು. ಕೆಲವರು ಚಿತ್ರವನ್ನು ಪ್ರೊಪಗ್ಯಾಂಡ ಎಂದು ದೂಚಿಸಿದ್ದರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries