ತಿರುವನಂತಪುರಂ: ಪಿಣರಾಯಿ ಸರಕಾರ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದ ಕೆ-ಪೋನ್ ಯೋಜನೆ ಆರಂಭದಿಂದ ಭಾರೀ ವಿವಾದಕ್ಕೀಡಾಗಿದೆ.
ಗುತ್ತಿಗೆ ಕಂಪನಿ ಎಲ್ ಎಸ್ ಕೇಬಲ್ ಗೆ ಕೆಎಸ್ ಐಟಿಎಲ್ ಅನಗತ್ಯ ನೆರವು ನೀಡಿದ್ದು, ಯೋಜನೆಗೆ ಅಗತ್ಯವಿರುವ ಕೇಬಲ್ ನ ಪ್ರಮುಖ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಂಡಿರುವುದನ್ನು ಎಜಿ ಪತ್ತೆ ಹಚ್ಚಿದೆ. ಇದೀಗ ವಿವಾದಿತ ಕೆ-ಪೋನ್ ಯೋಜನೆಯನ್ನು ಪ್ರಶ್ನಿಸಿ ಸ್ವಪ್ನಾ ಸುರೇಶ್ ಮುಂದೆ ಬಂದಿದ್ದಾರೆ.
ಕೆ ಪೋನ್ ಅಧ್ಯಕ್ಷರು ಯಾರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಬೇಕು ಎಂದು ಸ್ವಪ್ನಾ ಸುರೇಶ್ ಆಗ್ರಹಿಸಿದ್ದಾರೆ. ಆಕೆಯ ಮಾಜಿ ಪತಿ ಜಯಶಂಕರ್ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದಲ್ಲದೆ, ವಿನೋದ್ ತನ್ನೊಂದಿಗೆ ಕೆ ಪೋನ್‍ಗಾಗಿ ಪಿಡಬ್ಲ್ಯೂಸಿಯಲ್ಲಿ ಕೆಲಸ ಮಾಡಿದ್ದಾನೆ ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ. ಹನಿಮೂನ್, ಬೆಲ್ಲಿ ಡ್ಯಾನ್ಸ್ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿಯಾದರೂ ಬಾಯಿ ತೆರೆಯಲಿ ಎಂದು ಸ್ವಪ್ನಾ ಸುರೇಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.