ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯಿತಿ ಹರಿತಸಭಾದ ನ|ಏತೃತ್ವದಲ್ಲಿ ಸೋಮವಾರ ಪರಿಸರ ದಿನಾಚರಣೆ ನಡೆಯಿತು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನ್ಯಾಯವಾದಿ. ಎ.ಪಿ.ಉಷಾ ವಹಿಸಿದ್ದರು. ಉಪಾಧ್ಯಕ್ಷ ಡಿ.ಎ.ಅಬ್ದುಲಕುಂಞÂ ಮಾತನಾಡಿದರು.
………………………………………………………………………………………………………………………………………………………………………….
ಬೆಳ್ಳೂರಲ್ಲಿ
ಮುಳ್ಳೇರಿಯ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬೆಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಹರಿತಸಭೆ ಆಯೋಜಿಸಿದ್ದ ಸಮಾರಂಭವನ್ನು ಪಂಚಾಯಿತಿ ಅಧ್ಯಕ್ಷ ಎಂ.ಶ್ರೀಧರ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಗೀತಾ ಅಧ್ಯಕ್ಷತೆ ವಹಿಸಿದ್ದರು.
ಶೂನ್ಯ ತ್ಯಾಜ್ಯ ಪಂಚಾಯತಿ ಲಕ್ಷ್ಯದಲ್ಲಿ ಜಲಮೂಲಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡುವುದು ಮತ್ತು ಪ್ರಕೃತಿಯ ನೈಸರ್ಗಿಕ ಸಮತೋಲನವನ್ನು ರಕ್ಷಿಸುವುದು ಮುಂತಾದ ವಿಷಯಗಳ ಆಧಾರದ ಮೇಲೆ ವಿಷಯ ಮಂಡಿಸಲಾಯಿತು. ಸಭೆಯಲ್ಲಿ ಹಸಿರು ಕ್ರಿಯಾಸೇನೆಯ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು, ಕಾರ್ಯನಿರ್ವಾಹಕ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಮುಂತಾದವರು ಭಾಗವಹಿಸಿದ್ದರು. ಕಿರಿಯ ಆರೋಗ್ಯ ನಿರೀಕ್ಷಕ ಅರುಣ್ ಕುಮಾರ್ ತ್ಯಾಜ್ಯ ವಿಲೇವಾರಿ ಕಾರ್ಯ ಕಾರ್ಯಕ್ರಮದ ಚಟುವಟಿಕೆ ವರದಿ ಮಂಡಿಸಿದರು. ಬೆಳ್ಳೂರು ಗ್ರಾ.ಪಂ.ನ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಮುಖಂಡರು, ಗ್ರಾಮ ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಕೆ.ಸುಕುಮಾರ, ಕಿಲ ಪ್ರತಿನಿಧಿ ಶ್ರುತಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಪ್ರಭಾರ ಕಾರ್ಯದರ್ಶಿ ಎಂ.ಎಸ್.ರಾಜೇಶ್ ಸ್ವಾಗತಿಸಿ, ಗ್ರಾಮ ಪಂಚಾಯಿತಿ ಅಧಿಕಾರಿ ಸಿ.ರಾಜೇಶ್ ವಂದಿಸಿದರು.
…………………………………………………………………………………………………………………………………………………………………………..
ಕುಂಬ್ಡಾಜೆಯಲ್ಲಿ
ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯಲ್ಲಿ ಹರಿತಸಭೆ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಅಬ್ದುಲ್ ರಜಾಕ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖದೀಜಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಜೀವ ಶೆಟ್ಟಿ, ಸದಸ್ಯರಾದ ಮುಮ್ತಾಜ್, ಕೃಷ್ಣ ಶರ್ಮಾ, ಸುಂದರ ಮವ್ವಾರ್, ಎಂ.ಮೀನಾಕ್ಷಿ, ಪಿ.ಆಯಿಷತ್ ಮಾಶಿದ, ಕಾರ್ಯದರ್ಶಿ ಕೆ.ಹರೀಶ್, ವಿ. ಇ.ಒ. ಅಬ್ದುಲ್ಲ, ಯೋಜನಾ ಸಮಿತಿ ಉಪಾಧ್ಯಕ್ಷ ಎಸ್.ಮುಹಮ್ಮದ್ ಕುಂಞÂ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.