ಮಂಜೇಶ್ವರ: ಯೋಗವನ್ನು ಇಂದು ಜಗತ್ತಿನ ಪ್ರತಿ ದೇಶಗಳು ಅಂಗೀಕರಿಸಿದೆ. ಭಾರತದ ಪ್ರಾಚೀನ ಅಭ್ಯಾಸ ಮಾನವ ಸಂತತಿಯ ಮಾನಸಿಕ, ಮತ್ತು ಶಾರೀರಿಕ ದೃಢತೆಗೆ ಅತಿ ಅಗತ್ಯ. ಯೋಗ ಅನಾರೋಗ್ಯದಿಂದ ರಕ್ಷಣೆ ನೀಡುತ್ತೆ, ಯೋಗ ಶಾರೀರಿಕ ಬೆಳವಣಿಗೆಗೆ ಸಹಕಾರಿ, ಮಾನಸಿಕ ನೆಮ್ಮದಿಯ ಮೂಲ, ಮಾತ್ರವಲ್ಲ ಸದೃಢ ದೇಶ ರಚನೆಗೆ ಸದೃಢ ಚಿಂತನೆಗೆ ಸಹಕಾರಿ. ನರೇಂದ್ರ ಮೋದಿ ಯೋಗವನ್ನು ವಿಶ್ವದಾದ್ಯಂತ ಪರಿಚಯಿಸಿದರು, ಭಾರತದ ಋಷಿ ಸಂಸ್ಕಾರದವೇ ಯೋಗ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಹೇಳಿದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಕೋಳ್ಯೂರು ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಅಂಕಣಗಾರ ವಾರಾಣಸಿ ಗಣೇಶ್ ಭಟ್, ಯೋಗ ಶಿಕ್ಷಕಿ ಸೋನಿಕ ಹೊಸಂಗಡಿ ಉಪಸ್ಥಿತರಿದ್ದರು.
ರವಿ ರಾಜ್ ವರ್ಕಾಡಿ, ನಾರಾಯಣ ತುಂಗಾ, ಕೆ.ವಿ. ಭಟ್, ಭಾಸ್ಕರ್, ಜೀವನ್ ನೇತೃತ್ವ ನೀಡಿದರು. ಈ ಸಂದರ್ಭ ಯೋಗ ಪಟುಗಳನ್ನು ಗೌರವಿಸಲಾಯಿತು. ರಕ್ಷನ್ ಅಡಕಳ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.