ಮಲಪ್ಪುರಂ: ಶಾಲಾ ಪ್ರವೇಶೋತ್ಸವದ ದಿನವಾದ ನಿನ್ನೆ ಶಾಲೆ ತೆರೆದಿದ್ದು ಹೊಸ ವಿದ್ಯಾರ್ಥಿಗಳ ನಗು, ಗದ್ದಲಗಳು ಸಾಮಾನ್ಯ ದೃಶ್ಯವಾಗಿತ್ತು.
ಆದರೆ, ಮಲಪ್ಪುರಂ ಚೊಕ್ಕಾಡ್ ಸರ್ಕಾರಿ ಎಲ್‍ಪಿ ಶಾಲೆಗೆ ಈ ವರ್ಷ ಯಾವುದೇ ವಿದ್ಯಾರ್ಥಿ ಪ್ರವೇಶ ಪಡೆದಿಲ್ಲ. ಅರಣ್ಯ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಕೇವಲ ಹನ್ನೆರಡು ಮಕ್ಕಳಿದ್ದಾರೆ.
ಅರಣ್ಯ ಪ್ರದೇಶದÀ ಮಕ್ಕಳು ಓದುವ ಚೊಕ್ಕಾಡ್ ಸರ್ಕಾರಿ ಎಲ್ ಪಿ ಶಾಲೆ(ನಾಲ್ಪತ್ ಸೆಂಟ್ ಸ್ಕೂಲ್)ಗೆ ಈ ವರ್ಷ ಹೊಸತಾಗಿ ಯಾರೂ ಸೇರ್ಪಡೆಗೊಳ್ಳದಿರುವುದರಿಂದ ಒಂದನೇ ತರಗತಿ ಕೊಠಡಿಯ ಬಾಗಿಲು ತೆರೆಯಬೇಕಾಗಿ ಬರಲಿಲ್ಲ. ಒಂದನೇ ತರಗತಿಯಲ್ಲಿ ಮಕ್ಕಳಿಲ್ಲದ ಶಾಲೆಯಲ್ಲಿ ಉಳಿದ ಮೂರು ತರಗತಿಗಳಲ್ಲಿ ಒಟ್ಟು ಹನ್ನೆರಡು ಮಕ್ಕಳಿದ್ದಾರೆ. ಈ ಪೈಕಿ ಅತುಲ್ ಎಂಬ ವಿದ್ಯಾರ್ಥಿ ಮಾತ್ರ 4ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮೂರು ವರ್ಷಗಳ ಹಿಂದೆ ಅತುಲ್ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಶಾಲೆಯನ್ನು ತಲುಪದೆ ಅತುಲ್ ತನ್ನ ಒಂದನೇ ತರಗತಿ ಅಧ್ಯಯನವನ್ನು ಪೂರ್ಣಗೊಳಿಸಿದನು. ನಂತರ ಎರಡು ಮತ್ತು ಮೂರನೇ ತರಗತಿಗಳಲ್ಲಿ ಸಹವರ್ತಿಗಳಿಲ್ಲದೆ ಏಕಾಂಗಿಯಾಗಿ ಓದಿದ್ದು, ಈ ವರ್ಷವೂ ಅತುಲ್ ಒಬ್ಬನೇ. ಪ್ರಸ್ತುತ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಐವರು ಹಾಗೂ ಮೂರನೇ ತರಗತಿಯಲ್ಲಿ ಆರು ವಿದ್ಯಾರ್ಥಿಗಳಿದ್ದಾರೆ.