ಕಾಸರಗೋಡು: ಆಲಪ್ಪುಳದಲ್ಲಿ ನಡೆದ ಹದಿನೈದು ವರ್ಷಕ್ಕಿಂತ ಕೆಳಗಿನ ಬಾಲಕಿಯರ ರಾಜ್ಯ ಮಟ್ಟದ ಹಗ್ಗಜಗ್ಗಾಟ ಚಾಂಪಿಯನ್ ಷಿಪ್‍ನಲ್ಲಿ ದ್ವಿತೀಯ ಸ್ಥಾನ ಪಡೆದ ಜಿಲ್ಲಾ ತಂಡಕ್ಕೆ ಸ್ಥಳೀಯಾಡಳಿತ ಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಸ್ಪರ್ಧಾ ವಿಜೇತರಾದ ಬಾನಂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ತರಬೇತುದಾರರನ್ನು ಈ ಸಂದರ್ಭ ಗೌರವಿಸಲಾಯಿತು. ಬ್ಯಾಂಡ್ ಮೇಳಗಳೊಂದಿಗೆ ತಂಡವನ್ನು ಬಾನಂ ಪೇಟೆಗೆ ಕರೆದೊಯ್ಯಲಾಯಿತು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಉದ್ಘಾಟಿಸಿದರು. ಕೆ.ಎನ್.ಅಜಯನ್ ಅಧ್ಯಕ್ಷತೆ ವಹಿಸಿದ್ದರು. ಬಾನಂ ಕೃಷ್ಣನ್, ರಜಿತಾಭೂಪೇಶ್, ಪಿ.ಮನೋಜ್ ಕುಮಾರ್, ಪಚ್ಚೇನಿ ಕೃಷ್ಣನ್, ಸಿ.ಕೋಮಲವಲ್ಲಿ, ಪಿ.ಕೆ.ಬಾಲಚಂದ್ರನ್, ಟಿ.ವಿ.ಪವಿತ್ರನ್, ಮಣಿ ಮುಂಡತ್ ಉಪಸ್ಥಿತರಿದ್ದರು.