ನವದೆಹಲಿ: ಇಂದಿನ ದಿನಮಾನಗಳಲ್ಲಿ ಸ್ಮಾರ್ಟ್‌ಫೋನ್‌ನಿಂದ ಮಾಡಲಾಗದ ಕೆಲಸ ಯಾವುದಿಲ್ಲ ಹೇಳಿ? ಎಲ್ಲವನ್ನು ಆರಾಮಾಗಿ ಮೊಬೈಲ್ನಿಂದಲೇ ಮಾಡಬಹುದಾಗಿದೆ. ಬ್ಯಾಂಕಿಂಗ್, ಶಿಕ್ಷಣ ಕಲಿಕೆ, ಆರೋಗ್ಯ ಟ್ರ್ಯಾಕಿಂಗ್, ಶಾಪಿಂಗ್ ಹೀಗೆ ಹತ್ತಾರು ಕೆಲಸವನ್ನು ಇದರ ಮೂಲಕವೇ ಮಾಡುತ್ತೇವೆ.

ಇನ್ನು ಹಲವಾರು ಆಯಪ್ಗಳ ಮುಖಾಂತರ ಹೃದಯ ಬಡಿತ, ನಡಿಗೆ ಮೇಲ್ವಿಚಾರಣೆ ಸೇರಿ ಆರೋಗ್ಯವನ್ನು ತಿಳಿಯಬಹುದಾಗಿದೆ. ಆದರೆ ನಿಮಗೆ ಜ್ವರವಿದ್ದರೆ ವೈದ್ಯರ ಬಳಿ ಹೋಗುವ ಅವಶ್ಯತೆ ಇದ್ದೇ ಇದೆ. ಜತೆಗೆ ಇದನ್ನು ಕಂಡು ಹಿಡಿಯಲು ಥರ್ಮಾಮೀಟರ್ನ ಅವಶ್ಯಕತೆ ಇದೆ.
ಆದರೆ ಸದ್ಯ. ವಾಷಿಂಗ್ಟನ್ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವು ಸ್ಮಾರ್ಟ್ಫೋನ್ ಮೂಲಕ ಜ್ವರವನ್ನು ಪತ್ತೆಹಚ್ಚಲು 'ಫೀವರ್ ಆಯಪ್' ಎಂಬ ಹೊಸ ಅಪ್ಲಿಕೇಶನ್ನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ದೇಹದ ಉಷ್ಣತೆಯನ್ನು ಅಳೆಯಬಹುದಾಗಿದ್ದು, ಈ ಆಯಪ್ ನಿಮ್ಮ ಫೋನ್ನ್ನು ಥರ್ಮಾಮೀಟರ್ ಆಗಿ ಪರಿವರ್ತಿಸುತ್ತದೆ. ಎಂದರೆ ಮೊಬೈಲ್ನಲ್ಲಿನ ಟಚ್ ಸ್ಕ್ರೀನ್ ಸೆನ್ಸಾರ್‌ನ ಮೂಲಕ ಕೆಲವೇ ಸೆಕೆಂಡ್ಗಳಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಅಳೆಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.