ನವದೆಹಲಿ: ಬಿಸಿಗಾಳಿಯಿಂದ ಉಂಟಾದ ಅನಾರೋಗ್ಯದ ಸಮಸ್ಯೆ ಪರಿಹಾರಕ್ಕೆ ನೆರವು ನೀಡಲು ಕೇಂದ್ರ ಆರೋಗ್ಯ ಸಚಿವಾಲಯ, ಐಸಿಎಂಆರ್, ಐಎಂಡಿ ಮತ್ತು ಎನ್‌ಡಿಎಮ್‌ಎ ತಜ್ಞರ ತಂಡವು ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದೆ.
ನವದೆಹಲಿ: ಬಿಸಿಗಾಳಿಯಿಂದ ಉಂಟಾದ ಅನಾರೋಗ್ಯದ ಸಮಸ್ಯೆ ಪರಿಹಾರಕ್ಕೆ ನೆರವು ನೀಡಲು ಕೇಂದ್ರ ಆರೋಗ್ಯ ಸಚಿವಾಲಯ, ಐಸಿಎಂಆರ್, ಐಎಂಡಿ ಮತ್ತು ಎನ್‌ಡಿಎಮ್‌ಎ ತಜ್ಞರ ತಂಡವು ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದೆ.
ದೇಶದಲ್ಲಿನ ಬಿಸಿಗಾಳಿ ನಿರ್ವಹಣೆಗೆ ಸಾರ್ವಜನಿಕ ಆರೋಗ್ಯ ಸಿದ್ಧತೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಂಡವಿಯಾ ಮಂಗಳವಾರ ಉನ್ನತಮಟ್ಟದ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಡಾ. ವಿ.ಕೆ ಪೌಲ್, ನೀತಿ ಆಯೋಗದ ಸದಸ್ಯರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಬಿಸಿಗಾಳಿಯ ಬಗೆಗಿನ ಜಾಗೃತಿ, ಸಮಯೋಚಿತ ಸಿದ್ಧತೆಗಳ ಪ್ರಾಮುಖ್ಯತೆಯನ್ನು ಮಂಡವಿಯಾ ಅವರು ಒತ್ತಿ ಹೇಳಿದರು. ಕಡಿಮೆ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಬಿಸಿಗಾಳಿಯಿಂದ ಆರೊಗ್ಯದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ ಎನ್ನುವ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಗೆ ಸೂಚನೆ ನೀಡಿದರು.