ನವದೆಹಲಿ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿರುವಂತೆ ಚೀತಾಗಳ ಆವಾಸಸ್ಥಾನಕ್ಕೆ ಬೇಲಿ ನಿರ್ಮಿಸಲು ಭಾರತವು ಬಯಸುವುದಿಲ್ಲ ಎಂದು ಚೀತಾ ಯೋಜನೆಗಾಗಿ ಕೇಂದ್ರ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ರಾಜೇಶ್ ಗೋಪಾಲ್ ಗುರುವಾರ ಹೇಳಿದ್ದಾರೆ.

ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ತಪ್ಪಿಸಲು ಮತ್ತು ಆವಾಸಸ್ಥಾನವನ್ನು ವಿಭಜಿಸಲು ಚೀತಾಗಳ ಆವಾಸಸ್ಥಾನಗಳ ಸುತ್ತಲೂ ಬೇಲಿ ಹಾಕಬೇಕೆಂದು ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವುದಕ್ಕೆ ಸಹಕಾರ ನೀಡುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ತಜ್ಞರು ಶಿಫಾರಸು ಮಾಡಿದ್ದರು.
'ಬೇಲಿ ಹಾಕುವುದರಿಂದ ಪ್ರಾಣಿಗಳ ಮುಕ್ತ ಸಂಚಾರಕ್ಕೆ ತೊಡಕು ಉಂಟಾಗಲಿದೆ' ಎಂದು ಭಾರತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'ಸಂರಕ್ಷಿತ ಪ್ರದೇಶಗಳು ರಾಷ್ಟ್ರೀಯ ಉದ್ಯಾನಗಳಲ್ಲಿ ವಿಲೀನಗೊಳ್ಳಬೇಕು. ಇದರಿಂದ ವನ್ಯ ಜೀವಿಗಳ ನಡುವೆ ಆನುವಂಶಿಕ ಧಾತುಗಳು ಹರಿದಾಡುವುದು ಸಾಧ್ಯವಾಲಿದೆ' ಎಂದು ರಾಜೇಶ್ ಗೋಪಾಲ್ ಹೇಳಿದ್ದಾರೆ.