ಕಾಸರಗೋಡು: ತರಕಾರಿ ಸಏರಿದಂತೆ ನಿತ್ಯೋಪಯೋಗಿ ಸಾಮಗ್ರಿ ಬೆಲೆ ಅನಿಯಂತ್ರಿತವಾಗಿ ಏರಿಕೆಯಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ತಪಾಸಣೆ ಬಲಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಜಿಲ್ಲಧಿಕರಿ ಸಭಾಂಗಣದಲ್ಲಿ ಆಐಓಜಿಸಲಾಗಿದ್ದ ಜಿಲ್ಲೆಯ ಸಾರ್ವಜನಿಕ ಮಾರುಕಟ್ಟೆಯ ಸಗಟು ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು. ವ್ಯಾಪಾರ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ಸಾಮಗ್ರಿಗಳ ದರ ಪಟ್ಟಿಯನ್ನು ಅಂಗಡಿಗಳಲ್ಲಿ ಕಡ್ಡಾಯವಾ ಪ್ರದರ್ಶಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ತರಕಾರಿ ಅಂಗಡಿಗಳಲ್ಲಿ ಬೆಲೆ ಪಟ್ಟಿಪ್ರದರ್ಶಿಸುತ್ತಿಲ್ಲ ಎಂಬ ದೂರು ಇದೆ. ಸರಕುಗಳ ಗುಣಮಟ್ಟವನ್ನು ಆಧರಿಸಿ ಬೆಲೆಯನ್ನು ನಿರ್ಧರಿಸಬೇಕು. ವಸ್ತುಗಳ ಬೆಲೆ ಅತಿಯಾಗಿ ಏರಿಕೆಯಾಗದಂತೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬೀದಿ ಬದಿ ನಡೆಯುವ ಅನಧಿಕೃತ ವ್ಯಾಪಾರವನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವರ್ತಕರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಸರಬರಾಜು ಅಧಿಕಾರಿ ಕೆ.ಪಿ.ಸಾಜಿಮೋನ್, ತೂಕ ಮತ್ತು ಅಳತೆ ಇಲಾಖೆ ಉಪ ನಿಯಂತ್ರಕ ಪಿ.ಶ್ರೀನಿವಾಸ, ಕಾಸರಗೋಡು ನಗರಿಕ ಪೂರ್ಕೆಕೆ ಕಛೇರಿ ಎಟಿಎಸ್‍ಒ ಕೃಷ್ಣಾನಾಯ್ಕ್, ತೂಕ ಮತ್ತು ಅಳತೆ ಇಲಾಖೆ ಪ್ರತಿನಿಧಿ ಟಿ.ವಿ.ಪವಿತ್ರನ್, ಹೊಸದುರ್ಗ ತಾಲೂಕು ಪೂರೈಕೆ ಕಛೇರಿ ಪ್ರತಿನಿಧಿ ಇಮಾನ್ಯುವೆಲ್ ವೆಳ್ಳರಿಕುಂಡ್ ತಾಲೂಕು ನಾಗರಿಕ ಪೂರೈಕೆ ಇಲಾಖೆ ಕಚೇರಿಯ ಎಟಿಎಸ್ ಒ ಎ.ದಾಕ್ಷಾಯಣಿ, ಜಿಲ್ಲೆಯ ವ್ಯಪಾರಿಗಳು ಉಪಸ್ಥಿತರಿದ್ದರು.