ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು ಜೂನ್ 8ರಂದು ಶ್ರೀ ವನಶಾಸ್ತಾರ ದೇವರ ಪ್ರತಿಷ್ಠಾ ಕಲಶೋತ್ಸವ ಜರಗಲಿರುವುದು. ಜೂನ್.7ರಂದು ಬುಧವಾರ ಸಂಜೆ 6.30ಕ್ಕೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, 7 ಗಂಟೆಯಿಂದ ಆಚಾರ್ಯವರಣ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ರಾಕ್ಷೆಘ್ನ ಹೋಮ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ವನದುರ್ಗಾ ಹೋಮ, ವಾಸ್ತುಬಲಿ, ಜೂ.8ರಂದು ಬೆಳಗ್ಗೆ 6 ಗಂಟೆಯಿಂದ ದ್ವಾದಶ ನಾಳಿಕೇರ ಗಣಪತಿ ಹೋಮ, ಸಾನ್ನಿಧ್ಯ ಕಲಶಪೂಜೆ, 8 ಗಂಟೆಗೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀಸ್ವಾಮೀಜಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, 8.20ರಿಂದ 9.17ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಪ್ರಭಾಸತ್ಯಕ ಸಹಿತ ಶ್ರೀ ವನಶಾಸ್ತಾರ ದೇವರ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ.
10 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಮಾನ ಮಾಸ್ತರ್ ಕಾರ್ಮಾರು ಅಧ್ಯಕ್ಷತೆ ವಹಿಸಲಿದ್ದಾರೆ. ಕೊಂಡೆವೂರು ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಯುಎಇ ಉದ್ಯಮಿ ಪಾಡಿ ಗಂಗಾಧರನ್ ನಾಯರ್, ಪ್ರಸಿದ್ಧ ಎಲುಬು ರೋಗ ತಜ್ಞ ವೈದ್ಯ ಡಾ. ನಾಗರಾಜ ಭಟ್, ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ| ಕಿಶೋರ್ ಕುಮಾರ್ ಕುಣಿಕುಳ್ಳಾಯ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಸುಬ್ರಹ್ಮಣ್ಯ ಕಾರ್ಮಾರು, ಎಡನೀರು ಕಾನ ಶ್ರೀ ವನಶಾಸ್ತಾರ ದೇವಸ್ಥಾನದ ಅಧ್ಯಕ್ಷ ಸತೀಶ ಎಡನೀರು, ಉದ್ಯಮಿ ಪ್ರಶಾಂತ್ ಪೈ ಬಳ್ಳಂಬೆಟ್ಟು, ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯ ಪ್ರಬಂಧಕ ನಿತ್ಯಾನಂದ ಆರ್. ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿರುವರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಕಾರ್ಯಾಧ್ಯಕ್ಷ ರಾಮ ಕೆ.ಕಾರ್ಮಾರು ಸಭಾನಿರ್ವಹಣೆ ಮಾಡಲಿದ್ದಾರೆ. ಮಧ್ಯಾಹ್ನ 12ರಿಂದ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.