ವಾಷಿಂಗ್ಟನ್ (PTI): ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದ್ದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಅಮೆರಿಕದ ಸಂಸದರು, ಕಾನೂನು ತಜ್ಞರ ಆರೋಪದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು, ಉಭಯ ದೇಶಗಳ ನಡುವಣ ಜನತಂತ್ರದ ಮೌಲ್ಯಗಳು ಮತ್ತು ವೈವಿಧ್ಯದ ಮೇಲೆ ಬೆಳಕು ಚೆಲ್ಲಿಸಿದರು.
ವೈಟ್‌ಹೌಸ್‌ನಲ್ಲಿ ಗುರುವಾರ ಅಧ್ಯಕ್ಷ ಜೋ ಬೈಡನ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತ ಮತ್ತು ಅಮೆರಿಕ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಇಬ್ಬರ ನಡುವಣ ಬಾಂಧವ್ಯಕ್ಕೆ ಆಕಾಶ ಕೂಡ ಮಿತಿಯಿಲ್ಲ' ಎಂದು ಬಣ್ಣಿಸಿದರು.
ಎರಡು ದೇಶಗಳಲ್ಲಿರುವ ಸೊಸೈಟಿಗಳು ಮತ್ತು ಸಂಸ್ಥೆಗಳು ಪ್ರಜಾಸತ್ತಾತ್ಮಕ ಮೌಲ್ಯಗಳ ತಳಹದಿ ಮೇಲೆ ಕಾರ್ಯ ನಿರ್ವಹಿಸುತ್ತಿವೆ. ಇದು ಹೆಮ್ಮೆಯ ಸಂಗತಿ ಎಂದರು.
ಉಭಯ ರಾಷ್ಟ್ರಗಳ ಸಂವಿಧಾನದ ಪ್ರಸ್ತಾವನೆಯ ಆರಂಭವು ಮೂರು ಪದಗಳಿಂದ (ವಿ ದಿ ಪೀಪಲ್) ಆರಂಭವಾಗುತ್ತದೆ. ಇಂಥ ವೈವಿಧ್ಯಕ್ಕೆ ಹೆಮ್ಮೆಪಡಬೇಕಿದೆ ಎಂದ ಅವರು, 'ಜಾಗತಿಕ ಶಾಂತಿ, ನೆಮ್ಮದಿ, ಸ್ಥಿರತೆ ಮತ್ತು ಸಮೃದ್ಧಿಗೆ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲಿವೆ' ಎಂದು ಘೋಷಿಸಿದರು.
ಇಬ್ಬರೂ ನಂಬಿಕಸ್ಥ ಪಾಲುದಾರರಾಗಿದ್ದೇವೆ. ಹಾಗಾಗಿ, ಜಾಗತಿಕ ಅನಿಶ್ಚಿತತೆಗೆ ಪರಿಹಾರ ಹುಡುಕಲು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದ್ದೇವೆ ಎಂದರು.
ಉಭಯ ದೇಶಗಳು ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧ ಹೆಗಲಿಗೆ ಹೆಗಲುಕೊಟ್ಟು ಹೋರಾಟ ನಡೆಸುತ್ತವೆ. ಈ ಬಗ್ಗೆ ಬೈಡನ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದ ಅವರು, 40 ಲಕ್ಷ ಭಾರತೀಯರು ಅಮೆರಿಕದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಭಾರತೀಯರ ಸಮುದಾಯದವರಿಗೆ ವೈಟ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದರೆ ಮೋದಿ, ಬೈಡನ್‌ಗೆ ಅಭಿನಂದನೆ ಸಲ್ಲಿಸಿದರು. 2016ರಲ್ಲಿ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ಆಹ್ವಾನದ ಮೇರೆಗೆ ವೈಟ್‌ಹೌಸ್‌ಗೆ ಮೋದಿ ಭೇಟಿ ನೀಡಿದ್ದರು.
ವೈಟ್‌ಹೌಸ್‌ನಲ್ಲಿ ಮೋದಿ ಮಾರ್ದನಿ
ಬೈಡನ್ ದಂಪತಿಯ ಔತಣ ಸ್ವೀಕರಿಸಿದ ಬಳಿಕ ವೈಟ್‌ಹೌಸ್‌ಗೆ ಬಂದ ಮೋದಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಅಲ್ಲಿನ ಹುಲ್ಲುಹಾಸಿನ ಮೇಲೆ ನೆರೆದಿದ್ದವರಿಂದ ಮೋದಿ... ಮೋದಿ... ಎಂದು ಘೋಷಣೆ ಮಾರ್ದನಿಸಿತು.
'ಮತ್ತೆ ವೈಟ್‌ಹೌಸ್‌ಗೆ ಮೋದಿಗೆ ಸ್ವಾಗತ' ಎಂದು ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದರು. ಬಳಿಕ ಇಬ್ಬರೂ ನಾಯಕರು ಉಭಯ ದೇಶಗಳ ನಡುವಣ ರಕ್ಷಣೆ, ವ್ಯಾಪಾರ ಮತ್ತು ಸಹಕಾರ ಕುರಿತು ಪರಿಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾತು ಮುಂದುವರಿಸಿದ ಬೈಡನ್, '21ನೇ ಶತಮಾನದಲ್ಲಿ ಉಭಯ ದೇಶಗಳು ಜಗತ್ತಿನ ಶ್ರೇಷ್ಠ ರಾಷ್ಟ್ರಗಳಾಗಿದ್ದು, ಒಳ್ಳೆಯ ಸ್ನೇಹಿತರೂ ಆಗಿದ್ದೇವೆ. ವಿಶ್ವದ ಶಕ್ತಿಯುತ ರಾಷ್ಟ್ರಗಳಾಗಿವೆ' ಎಂದು ವ್ಯಾಖ್ಯಾನಿಸಿದರು.
'ವಿಶ್ವ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಎರಡೂ ದೇಶಗಳು ಜೊತೆಯಾಗಿ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವಪೂರ್ಣವಾಗಿದೆ' ಎಂದರು.
'ನಮ್ಮ ಡಿಎನ್‌ಎಯಲ್ಲೇ ಪ್ರಜಾಪ್ರಭುತ್ವವಿದೆ'
ಬಳಿಕ ಮಾತು ಮುಂದುವರಿಸಿದ ಬೈಡನ್, 'ನಾವು ಚೀನಾಕ್ಕಿಂತ ಭಿನ್ನವಾಗಿದ್ದೇವೆ. ಎರಡು ದೇಶಗಳ ಡಿಎನ್‌ಎನಲ್ಲಿ ಪ್ರಜಾಪ್ರಭುತ್ವ ಅಡಕವಾಗಿದೆ' ಎಂದರು.
'21ನೇ ಶತಮಾನದಲ್ಲಿ ಉಭಯ ದೇಶಗಳು ಜಗತ್ತಿನ ಶ್ರೇಷ್ಠ ರಾಷ್ಟ್ರಗಳಾಗಿದ್ದು, ಒಳ್ಳೆಯ ಸ್ನೇಹಿತರೂ ಆಗಿದ್ದೇವೆ. ವಿಶ್ವದ ಶಕ್ತಿಯುತ ರಾಷ್ಟ್ರಗಳಾಗಿವೆ' ಎಂದು
ವ್ಯಾಖ್ಯಾನಿಸಿದರು.
'ವಿಶ್ವ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಎರಡೂ ದೇಶಗಳು ಜೊತೆಯಾಗಿ ಕೆಲಸ
ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪೂರ್ಣವಾಗಿದೆ'
ಎಂದರು.