ಏಲೂರು: ಇಲ್ಲಿನ ವೆಂಕಟಪುರಂ ಗ್ರಾಮದ ಬಾಲಕಿಯೊಬ್ಬಳು ಪೊಲೀಸ್ ಸಹಾಯವಾಣಿ 'ದಿಶಾ'ಗೆ ಸಕಾಲಕ್ಕೆ ಕರೆ ಮಾಡಿದ ಕಾರಣ ಆಕೆಯ ಬಾಲ್ಯವಿವಾಹವು ರದ್ದುಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಏಲೂರು: ಇಲ್ಲಿನ ವೆಂಕಟಪುರಂ ಗ್ರಾಮದ ಬಾಲಕಿಯೊಬ್ಬಳು ಪೊಲೀಸ್ ಸಹಾಯವಾಣಿ 'ದಿಶಾ'ಗೆ ಸಕಾಲಕ್ಕೆ ಕರೆ ಮಾಡಿದ ಕಾರಣ ಆಕೆಯ ಬಾಲ್ಯವಿವಾಹವು ರದ್ದುಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
'ಬಾಲಕಿಯ ಮದುವೆಯನ್ನು ಮನೆಯ ಹಿರಿಯರು ಜೂನ್ 8ರಂದು ನಿಗದಿಪಡಿಸಿದ್ದರು.
ಬಾಲಕಿಯ ಕರೆ ಸ್ವೀಕರಿಸಿದ ಐದು ನಿಮಿಷದೊಳಗೆ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಕೆ, ತನ್ನ ಇಚ್ಛೆಯ ವಿರುದ್ಧವಾಗಿ ಮದುವೆ ನಿಗದಿಪಡಿಸಲಾಗಿದೆ ಎಂದು ದೂರಿದ್ದಾಳೆ. ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮದುವೆಯಾಗುವುದಾಗಿಯೂ ಒಪ್ಪಿದ್ದಾಳೆ. ಬಳಿಕ ಆಕೆಯ ಪೋಷಕರ ಮನವೊಲಿಸಿ ಮದುವೆಯನ್ನು ರದ್ದುಗೊಳಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.