ಕಾಸರಗೋಡು : ಕ್ರೀಡಾ ಪಟುಗಳು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ದಮನಿಸುವ ಪ್ರಯತ್ನ ನಡೆಸುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ಕಾಸರಗೋಡು ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಂದು ಕಡೆ ಹೊಸ ಸಂಸತ್‍ಭವನದ ಕಟ್ಟಡ ಉದ್ಘಾಟನೆಯೊಂದಿಗೆ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಗೃಹಸಚಿವ ಅಮಿತ್ ಶಾ ಅವರ ಪೆÇೀಲೀಸರು ಕ್ರೀಡಾಳುಗಳನ್ನು ಬೇಟೆಯಾಡುತ್ತಿರುವುದು ವಿಷಾದನೀಯ. ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಅವರನ್ನು ಮೋದಿ ಸರ್ಕಾರ ಎಲ್ಲ ರೀತಿಯಲ್ಲೂ ಸಂರಕ್ಷಿಸುವ ಪ್ರಯತ್ನ ನಡೆಸುತ್ತಿದೆನರೇಂದ್ರ ಮೋದಿ ಅವರ ಸಂಪುಟದ ಇಬ್ಬರು ಪ್ರಮುಖ ಮಹಿಳಾ ಸಚಿವರಾದ . ಸ್ಮøತಿ ಇರಾನಿ ಮತ್ತು ಮೀನಾಕ್ಷಿ ಲೇಖಿ ಇಬ್ಬರೂ ಈ ವಿಷಯದ ಬಗ್ಗೆ ಚಕಾರವೆತ್ತದೆ ಮಹಿಳಾ ಸಮುದಾಯಕ್ಕೆ ಅಪಚಾರವೆಸಗಿದ್ದಾರೆ. ಬ್ರಿಜ್ ಭೂಷಣ್ ಅವರ ಲೈಂಗಿಕ ದೌರ್ಜನ್ಯದ ವಿರುದ್ಧ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತದ ಹೆಮ್ಮೆಯ ತಾರೆಗಳ ಧ್ವನಿಯನ್ನು ಕೇಳಲು ಅಥವಾ ಅವರ ಬೇಡಿಕೆ ಈಡೇರಿಸಲು ಸಿದ್ಧವಾಗದಿರುವುದು ನೋವಿನ ಸಂಗತಿ. ಅವರ ಹೋರಾಟವನ್ನು ದಮನಿಸಲು ಅವಕಾಶ ನೀಡದೆ, ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನಾಕಾರರ ಜತೆಗಿದ್ದು ಹೋರಾಟ ನಡೆಸಲಿದೆ. ಮಹಿಳಾ ಕಾಂಗ್ರೆಸ್‍ನ ಕೇರಳ ರಆಜ್ಯ ಘಟಕದ ತೀರ್ಮಾನದನ್ವಯ ಕಾಸರಗೋಡು ಜಿಲ್ಲಾ ಮಟ್ಟದಲ್ಲೂ ಹೋರಾಟ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಮುಮದುವರಿಸಲಿರುವುದಾಗಿ ಮಿನಿ ಚಂದ್ರನ್ ತಿಳಿಸಿದ್ದಾರೆ. ಮಹಿಳಾ ಕಾಂಗ್ರೆಸ್ ನಾಯಕಿಯರಾದ ಸಿಂದೂರ್ ಕೆ ವಲಿಯಪರಂಬ, ಜಮೀಲಾ ಅಹ್ಮದ್ ಕಾಸರಗೋಡು, ಸುಕುಮಾರಿ ಶ್ರೀಧರನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.