ನವದೆಹಲಿ: ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ರಾಯಭಾರ ಕಚೇರಿಗಳ ಮೇಲೆ ಖಾಲಿಸ್ತಾನ ಬೆಂಬಲಿಗರು ನಡೆಸಿದ್ದ ದಾಂಧಲೆ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ.
ನವದೆಹಲಿ: ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ರಾಯಭಾರ ಕಚೇರಿಗಳ ಮೇಲೆ ಖಾಲಿಸ್ತಾನ ಬೆಂಬಲಿಗರು ನಡೆಸಿದ್ದ ದಾಂಧಲೆ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ.
ಅಲ್ಲದೆ, ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಬಳಿ ನಡೆದಿದ್ದ ಹಿಂಸಾಕೃತ್ಯ, ದಾಂದಲೆ ಕೃತ್ಯವನ್ನೂ ಎನ್‌ಐಎ ತನಿಖೆಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಖಾಲಿಸ್ತಾನ್ ಪರ ಪ್ರತಿಭಟನಕಾರರ ಗುಂಪು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿ ಮೇಲೆ ಮಾರ್ಚ್‌ನಲ್ಲಿ ದಾಳಿ ಮಾಡಿ, ಹಾನಿಗೊಳಿಸಿತ್ತು. ಭದ್ರತಾ ಕಚೇರಿ ಭೇದಿಸಿ ನುಗ್ಗಿದ್ದ ಪ್ರತಿಭಟನಕಾರರು, ಕಚೇರಿಯ ಒಳಗೆ ಖಾಲಿಸ್ತಾನ ಪರ ಧ್ವಜವನ್ನು ಇಟ್ಟಿದ್ದರು. ಬಳಿಕ, ಅದನ್ನು ಸಿಬ್ಬಂದಿ ತೆರವುಗೊಳಿಸಿದ್ದರು.
ಭಾರತ ಈ ಘಟನೆಯನ್ನು ಕುರಿತಂತೆ ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು. ಅಲ್ಲದೆ, ಕೆನಡಾದ ಘಟನೆ ಕುರಿತಂತೆಯೂ ಇಲ್ಲಿರುವ ಕೆನಡಾ ರಾಯಭಾರಿಯನ್ನು ಕರೆಸಿ ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು.
ಈ ಮಧ್ಯೆ, ಎನ್‌ಐಎ ಜೂನ್ 12ರಂದು ಲಂಡನ್ ಕೃತ್ಯ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಕೋರಿದೆ. ಪಂಜಾಬ್ ಪೊಲೀಸರು, ಮೂಲಭೂತವಾದಿ ಅಮೃತಪಾಲ್ ಸಿಂಗ್ ವಿರುದ್ಧ ಕ್ರಮಜರುಗಿಸಿದ ಹಿಂದೆಯೇ ಈ ಪ್ರತಿಭಟನೆಗಳು ಜರುಗಿದ್ದವು.