ಕಾಸರಗೋಡು: ಸಮಾಜವನ್ನು ತಿದ್ದುವಲ್ಲಿ ಮಧ್ಯಮಗಳ ಪಾತ್ರ ಮಹತ್ತರವಾಗಿದ್ದು, ಸ್ವತಂತ್ರ ಮತ್ತು ನ್ಯಾಯಯುತ ದೃಷ್ಟಿಕೋನದೊಂದಿಗೆ ಪತ್ರಕರ್ತರು ಕರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಇಭಾಶೇಖರ್ ತಿಳಿಸಿದ್ದಾರೆ.
ಅವರು ಕಾಞಂಗಾಡ್‍ನ ಅಲಮಿಪಳ್ಳಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಎರಡನೇ ಜಯಂತ್ಯುತ್ಸವದ ಅಂಗವಾಗಿ 'ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ-2023' ರ ಸಂಯೋಜಕವಾಗಿ ಜಿಲ್ಲಾ ಮಾಹಿತಿ ಕಛೇರಿ ಆಯೋಜಿಸಿದ್ದ ಮಾಧ್ಯಮ ಪ್ರಶಸ್ತಿಯನ್ನು ಜಿಲ್ಲಾ ಮಾಹಿತಿ ಕಛೇರಿ ಪಿಆರ್ ಚೇಂಬರ್‍ನಲ್ಲಿ ವಿತರಿಸಿ ಮಾಡಿದರು. ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮರಾಜ್ ಅಧ್ಯಕ್ಷತೆ ವಹಿಸಿದ್ದರು.
ಅತ್ಯುತ್ತಮ ವೃತ್ತಪತ್ರಿಕೆ ವರದಿಗಾರ ರಹನಾಸ್ ಮಡಿಕೈ, ಅತ್ಯುತ್ತಮ ಛಾಯಾಗ್ರಾಹಕ ಸುರೇಂದ್ರನ್ ಮಡಿಕೈ(ದೇಶಾಭಿಮಾನಿ)ಅತ್ಯುತ್ತಮ ದೃಶ್ಯ ಮಾಧ್ಯಮ ವರದಿಗಾರ ಫೈಸಲ್ ಬಿನ್ ಅಹಮದ್ (ಏಷ್ಯಾನೆಟ್ ನ್ಯೂಸ್‍ಕಾಸರಗೋಡು) ಮತ್ತು ಬೆಸ್ಟ್ ಆಪರೇಟರ್ ಕೆ.ಸುನೀಲ್ ಕುಮಾರ್ (ಏಷ್ಯಾನೆಟ್ ನ್ಯೂಸ್ ಕಾಸರಗೋಡು) ಅವರು ಜಿಲ್ಲಾಧಿಕಾರಿಯಿಂದ ಪ್ರಮಾಣ ಪತ್ರ ಮತ್ತು ನಗದು ಪುರಸ್ಕಾರವನ್ನು ಸ್ವೀಕರಿಸಿದರು. ಮುದ್ರಣ ಮಾಧ್ಯಮದಲ್ಲಿ ವಿಶೇಷ ಪರಿಗಣನೆಯಾಗಿ ಶರೀಫ್ ಕುಲೇರಿ (ಸುಪ್ರಭಾತಂ) ಮತ್ತು ದೃಶ್ಯ ಮಾಧ್ಯಮದಲ್ಲಿ ಅರ್ಜುನ್ ಕಲ್ಲ್ಯಾಡ್ (ಮಾತೃಭೂಮಿ ವಾರ್ತೆ) ಪ್ರಮಾಣ ಪತ್ರ ಸ್ವೀಕರಿಸಿದರು. ಪ್ರಾಧ್ಯಾಪಕ ಕೆ.ಪಿ.ಜಯರಾಜನ್ ಮತ್ತು ಹಿರಿಯ ಪತ್ರಕರ್ತ ಸನ್ನಿ ಜೋಸೆಫ್ ತೀರ್ಪುಗಾರರಾಗಿದ್ದರು.
ಜಿಎಸ್ ಟಿ ಜಂಟಿ ಆಯುಕ್ತ ಪಿ.ಸಿ.ಜಯರಾಜನ್, ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶನ್ ನಾಯರ್, ಡಿಐಸಿ ಪ್ರಧಾನ ವ್ಯವಸ್ಥಾಪಕ ಎಂ.ಸಜಿತ್ ಕುಮಾರ್, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಹಾಶಿಂ, ಕಾಸರಗೋಡು ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ಪದ್ಮೇಶ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ಎ.ಪಿ. ದಿಲ್ನಾ ವಂದಿಸಿದರು.