ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾಚನ ಮಾಸಾಚರಣೆಗೆ ಚಾಲನೆ ನೀಡಲಾಯಿತು.ಮುಖ್ಯ ಶಿಕ್ಷಕಿ ವಾರಿಜ ನೇರೋಳು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಓದುವಿಕೆಯ ಮಹತ್ವವನ್ನು ವಿವರಿಸಿದರು. ಹಿರಿಯ ಸಹಾಯಕಿ ದಿವ್ಯಾಗಂಗಾ, ನಜುಮುನ್ನೀಸಾ ಶುಭ ಹಾರೈಸಿದರು. ಶಿಕ್ಷಕ ದಾಸಪ್ಪ, ಸುಪ್ರಿಯಾ, ಶಾರದಾ, ನಿಶಾ, ನವೀನ್ ನೇತೃತ್ವ ವಹಿಸಿದ್ದರು. ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳ ಕಾರ್ಯಕ್ರಮಗಳು ನಡೆದವು.