ಕಾಸರಗೋಡು: ಮಾದಕವಸ್ತುಗಳ ಸೇವನೆಯಿಂದ ಜೀವಹಾನಿ ತಂದೊಡ್ಡುವುದರ ಜತೆಗೆ, ಇದು ಸಮಾಜವನ್ನು ಶಿಥಿಲಗೊಳಿಸಲು ಕಾರಣವಾಗುವುದಾಗಿ ಅಬಕಾರಿ ಬದಿಯಡ್ಕ ರೇಂಜ್ ಕಚೇರಿ ಅಧಿಕಾರಿ ಜನಾರ್ದನ್ ತಿಳಿಸಿದ್ದಾರೆ. ಅವರು ವಿಶ್ವ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಅಂಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರುಗಿದ ಜಾಗೃತಿ ಕಾರ್ಯಕ್ರಮದಲ್ಲಿ ತರಗತಿ ನಡೆಸಿದರು.
ಮಾದಕ ವಸ್ತು ಮಾನವ ಸಂಕುಲಕ್ಕೆ ವಿನಾಶಕಾರಿಯಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು. ಗುಟ್ಕಾ, ಪಾನ್‍ಪರಾಗ್ ಸೇರಿದಂತೆ ನಾನಾ ವಿಧದ ಮಾದಕ ದ್ರವ್ಯಗಳಿಗೆ ಕೆಲವು ವಿದ್ಯಾರ್ಥಿಗಳೂ ದಾಸರಾಗುತ್ತಿದ್ದು, ಇದು ಭವಿಷ್ಯದಲ್ಲಿ ಆತಂಕ ತಂದೊಡ್ಡಲಿರುವುದರಿಂದ ಇಂತಹ ಪದಾರ್ಥ ಸೇವನೆಯಿಂದ ದೂರವಿರಬೇಕು ಎಮದು ಕಿವಿಮಾತು ಹೇಳಿದರು.
ಶಾಲಾ ಅಧ್ಯಾಪಕರಾದ ವೇಣುಗೋಪಾಲ, ಕೃಷ್ಣರಾಜ, ಪ್ರವೀಣ , ವಿದ್ಯಾರತ್ನ ಭಾಗವಹಿಸಿದ್ದರು. ಕೃಷ್ಣ ಪ್ರಕಾಶ ಸ್ವಾಗತಿಸಿದರು. ವೇಣು ಗೋಪಾಲ ವಂದಿಸಿದರು.