HEALTH TIPS

ಸಂಸತ್ ಸ್ಥಾನದಿಂದ ಅನರ್ಹತೆ, ನನಗೆ ಸಿಕ್ಕ ದೊಡ್ಡ ಅವಕಾಶ: ರಾಹುಲ್ ಗಾಂಧಿ

                 ಸ್ಟ್ಯಾನ್‌ಫೋರ್ಡ್‌: 'ರಾಜಕೀಯ ಪ್ರವೇಶ ಮಾಡಿದಾಗ, ಮುಂದೊಂದು ದಿನ ಲೋಕಸಭೆಯ ಸದಸ್ಯತ್ವದಿಂದ ನನ್ನನ್ನು ಅನರ್ಹಗೊಳಿಸಲಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಅನರ್ಹಗೊಳಿಸಿರುವುದರಿಂದ ಜನರ ಸೇವೆ ಮಾಡಲು ನನಗೆ 'ಬಹುದೊಡ್ಡ ಅವಕಾಶ'ವಾಗಿ ಪರಿಣಮಿಸಿದೆ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

               ಅಮೆರಿಕದ ಪ್ರವಾಸದಲ್ಲಿರುವ ರಾಹುಲ್‌, ಬುಧವಾರ ರಾತ್ರಿ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

            '2000ರಲ್ಲಿ ನಾನು ರಾಜಕೀಯ ಪ್ರವೇಶ ಮಾಡಿದೆ. ಆಗ ನಾನು ಹೀಗೆಲ್ಲಾ ಆಗುತ್ತದೆ ಎಂದು ಭಾವಿಸಿರಲಿಲ್ಲ. ಆದರೆ, ಹೀಗೆ ಆಗಿರುವುದು ನನಗೆ ಸಿಕ್ಕ 'ದೊಡ್ಡ ಅವಕಾಶ'. ಬಹುಶಃ ನನಗೆ ಸಿಗಬಹುದಾಗಿದ್ದ ದೊಡ್ಡ ಅವಕಾಶವೇ ಸಿಕ್ಕಿದೆ. ಇದೇ ಅಲ್ಲವೇ ರಾಜಕೀಯ' ಎಂದರು.

              'ಈ ಎಲ್ಲ ನಾಟಕ ಆರಂಭವಾಗಿದ್ದು, ಆರು ತಿಂಗಳ ಹಿಂದೆ. ನಾವು ಒದ್ದಾಡುತ್ತಿದ್ದೆವು. ಭಾರತದ ಎಲ್ಲ ವಿರೋಧ ಪಕ್ಷಗಳೂ ಕಷ್ಟದಲ್ಲಿದ್ದವು. ಆದರೆ, ಅವರ ಬಳಿ ಆರ್ಥಿಕ ಬಲವಿತ್ತು, ಸಂಸ್ಥೆಗಳನ್ನು ಕಬಳಿಸಿದ್ದರು. ದೇಶದಲ್ಲಿ ನಾವು ಪ್ರಜಾಸತ್ತಾತ್ಮಕ ಹೋರಾಟ ನಡೆಸಲು ಹೆಣಗುತ್ತಿದ್ದೆವು. ಈ ಹೊತ್ತಿನಲ್ಲಿ ಭಾರತ ಜೋಡೊ ಯಾತ್ರೆ ಮಾಡಲು ನಾನು ನಿರ್ಧರಿಸಿದೆ' ಎಂದರು.

               'ಇಲ್ಲಿ ಭಾರತೀಯ ವಿದ್ಯಾರ್ಥಿಗಳ ಗುಂಪಿದೆ. ನಿಮ್ಮೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಮತ್ತು ನಿಮ್ಮೊಂದಿಗೆ ಮಾತನಾಡಲು ನಾನು ಬಯಸಿದ್ದೇನೆ. ಇದು ನನ್ನ ಹಕ್ಕು. ಹೀಗೆ ನಾನು ವಿದೇಶ ಪ್ರವಾಸ ಮಾಡುವುದು ಯಾರದ್ದೋ ಸಹಾಯ ಕೋರಲು ಅಲ್ಲ' ಎಂದರು.

                 'ನಮ್ಮ ಪ್ರಧಾನಿ ಯಾಕೆ ಇಲ್ಲಿಗೆ ಬಂದು, ನಿಮ್ಮೊಂದಿಗೆ ಮಾತನಾಡುವುದಿಲ್ಲ' ಎಂದು ರಾಹುಲ್‌ ಅವರು ಪ್ರಶ್ನಿಸುತ್ತಿದ್ದಂತೆಯೇ, 'ಪ್ರಧಾನಿ ಮೋದಿ ಅವರಿಗೆ ನಮ್ಮ ವಿಶ್ವವಿದ್ಯಾಲಯಕ್ಕೆ ಸದಾ ಸ್ವಾಗತ ಇದೆ. ಯಾವಾಗಬೇಕಿದ್ದರೂ ಅವರು ಇಲ್ಲಿಗೆ ಬರಬಹುದು, ನಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡಬಹುದು' ಎಂದು ಕಾರ್ಯಕ್ರಮದ ನಿರೂಪಕರು ಹೇಳಿದರು.

             ಇಡೀ ಸಭಾಂಗಣ ವಿದ್ಯಾರ್ಥಿಗಳಿಂದ ತುಂಬಿತ್ತು. ಹೀಗಾಗಿ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಸಭಾಂಗಣದ ಒಳಗೆ ಹೋಗಲು ಅವಕಾಶ ಸಿಗಲಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿಯೇ, ಕಾರ್ಯಕ್ರಮ ಆರಂಭವಾಗುವ ಎರಡು ತಾಸಿಗೂ ಮುನ್ನ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.

                   'ಚೀನಾ-ಭಾರತ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಆದರೆ ಚೀನಾವು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಅದು ಅಷ್ಟು ಸುಲಭ ಅಲ್ಲ' ಎಂದು ರಾಹುಲ್‌ ಗಾಂಧಿ ಹೇಳಿದರು. 'ಮುಂದಿನ 5-10 ವರ್ಷಗಳಲ್ಲಿ ಭಾರತ-ಚೀನಾ ಸಂಬಂಧ ಯಾವ ರೀತಿ ಇರಲಿದೆ ಎಂದು ನೀವು ಭಾವಿಸುತ್ತೀರಿ' ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು. 'ಸದ್ಯಕ್ಕಂತೂ ಸಂಬಂಧ ಸುಧಾರಣೆ ಕಷ್ಟವಿದೆ. ಅವರು ನಮ್ಮ‍ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೂ ಅವರು ನಮ್ಮ ಮೇಲೆ ಎರಗಲು ಸಾಧ್ಯವಿಲ್ಲ. ಇದು ಆಗುವುದೂ ಇಲ್ಲ' ಎಂದು ರಾಹುಲ್‌ ಉತ್ತರಿಸಿದರು. ರಷ್ಯಾ- ಭಾರತ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು 'ನಾವು ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಹಲವು ವಿಷಯಗಳಲ್ಲಿ ನಾವು ಅವರನ್ನು ಅವಲಂಬಿಸಿದ್ದೇವೆ. ಆದ್ದರಿಂದ ಈ ಬಗ್ಗೆ ಭಾರತ ಸರ್ಕಾರದ ನಿಲುವೇ ನನ್ನ ನಿಲುವು' ಎಂದರು.

                                            'ಅಲ್ಪಸಂಖ್ಯಾತ ಗುಂಪಿನ ನಿಯಂತ್ರಣ'

                 ಸುಳ್ಳು ಮಾಹಿತಿ' 'ರಾಹುಲ್‌ ಗಾಂಧಿ ಅವರ ಕಾರ್ಯಕ್ರಮವನ್ನು ಅಲ್ಪಸಂಖ್ಯಾತ ಗುಂಪೊಂದು ನಿಯಂತ್ರಿಸುತ್ತಿದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಕಾರ್ಯಕ್ರಮದ ಕುರಿತು ಸುಳ್ಳು ಮಾಹಿತಿ ಹರಡಲಾಗುತ್ತಿದೆ' ಎಂದು ಅಮೆರಿಕದ ಸಾಗರೋತ್ತರ ಕಾಂಗ್ರೆಸ್‌ (ಐಒಸಿಯುಎಸ್‌ಎ) ಹೇಳಿದೆ. 'ರಾಹುಲ್‌ ಗಾಂಧಿ ಅವರ ಕಾರ್ಯಕ್ರಮಗಳು ಭಾರತ ಹಾಗೂ ಅಮೆರಿಕದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಪ್ರಗತಿಶೀಲ ದೃಷ್ಟಿಕೋನವುಳ್ಳ ಅವರ ವಿಚಾರಗಳನ್ನು ಕೇಳಲು ಜನರು ಉತ್ಸುಕರಾಗಿದ್ದಾರೆ. ಇದು ಕೆಲವರನ್ನು ಕೆರಳಿಸಿದೆ. ಅದಕ್ಕಾಗಿಯೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಎಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries