ಮಂಜೇಶ್ವರ: ಮಂಜೇಶ್ವರ ವಿಧಾನ ಕ್ಷೇತ್ರದ ಕೆ-ಪೋನ್ ಅನ್ನು ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಜಿಎಚ್ ಎಸ್ ಕಡಂಬಾರ್ ನಡೆದ ಸಮಾರಂಭದ ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಪೈವಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಜಯಂತಿ, ಹೆಚ್ಚುವರಿ ತಹಸೀಲ್ದಾರ್ ಕೆ.ಎ.ಜೇಕಬ್ ಭಾಗವಹಿಸಿದ್ದರು. ಮೀಂಜ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೋಪಾಲನ್ ಸ್ವಾಗತಿಸಿ, ಉಪಾಧ್ಯಕ್ಷ ಜಯರಾಮ ವಂದಿಸಿದರು.