ಕುಂಬಳೆ: ರಾಜ್ಯ ಸಾರಿಗೆ ಇಲಾಖೆಯಿಂದ ರಸ್ತೆ ಅಭಿವೃದ್ಧಿಗಾಗಿ ಕಡಿದ ಒಂದೊಂದು ಮರಕ್ಕೆ ಬದಲಾಗಿ ಹತ್ತು ಗಿಡಗಳನ್ನು ನೆಡುವ ಯೋಜನೆ ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರ ಪರಿಸರ ದಿನದಂದು ಕುಂಬಳೆ ಮತ್ತು ಬದಿಯಡ್ಕÀದಲ್ಲಿ ಮರ ನೆಡುವ ಯೋಜನೆ ಜಾರಿಗೊಳಿಸಿದೆ. ಕೇರಳ ರಾಜ್ಯ ಸಾರಿಗೆ ಇಲಾಖೆಯ ರೀಬಿಲ್ಟ್ ಕೇರಳ ಯೋಜನೆಯ ಭಾಗವಾಗಿ ಕುಂಬಳ-ಬದಿಯಡ್ಕ-ಮುಳ್ಳೇರಿಯ ರಸ್ತೆ ನವೀಕರಣದ ಅಂಗವಾಗಿ ಕಡಿದ ಮರಗಳ ಬದಲಿಗೆ ಸಸಿಗಳನ್ನು ನೆಟ್ಟು ಪ್ರಕೃತಿಯನ್ನು ಪರಿಪೋಶಿಸುವ ಅಭಿವೃದ್ಧಿ ನೀತಿಯನ್ನು ಸರ್ಕಾರ ಖಚಿತಪಡಿಸುತ್ತಿದೆ. ರಸ್ತೆ ನವೀಕರಣ ಕಾಮಗಾರಿ ಕೈಗೆತ್ತಿಕೊಂಡ ಆರ್ ಡಿಎಸ್ ಪ್ರಾಜೆಕ್ಟ್ಸ್ ಕಂಪನಿ, ಕಡಿಯುವ ಪ್ರತಿ ಮರಕ್ಕೆ ಬದಲಾಗಿ 10 ಮರಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಿತು. ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡವರು ಪರಿಸರ ದಿನದಂದು ಗಿಡ ನೆಡಲು ಮುಂದಾಗಿರುವುದು ಯೋಜನೆಯ ಮಹತ್ವವನ್ನು ಸಾರಿತು.
ಕುಂಬಳೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹಾಗೂ ಕುಂಬಳೆ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬದಿಯಡ್ಕದಲ್ಲಿ ಕಾಸರಕೋಟ ಶಾಸಕ ಎನ್.ಎ.ನೆಲ್ಲಿಕುನ್ನು, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿ. ಶಾಂತಾ ಅವರು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ರಸ್ತೆ ನಿರ್ಮಾಣದ ಪ್ರಭಾರಿ ಕೆಎಸ್‍ಟಿಪಿ ಕಾರ್ಯಪಾಲಕ ಅಭಿಯಂತರ, ಬದಿಯಡ್ಕ ಎಸ್‍ಐ. ಕೆ.ಪಿ.ವಿನೋದ್ ಕುಮಾರ್, ಪರಿಸರವಾದಿ ರಾಜು ಮಾಸ್ತರ್, ಯೋಜನಾ ವ್ಯವಸ್ಥಾಪಕ ಅರವಿಂದ್, ಡಿ.ಪಿ.ಎಂ. ಪೆÇ್ರಜೆಕ್ಟರ್ ಆರ್ಟಿಎಸ್ ರಾಬಿನ್, ಕೆಎಸ್‍ಟಿಪಿ ಅಧಿಕಾರಿಗಳಾದ ಸಂತೋಷ್, ಹರೀಶ್, ವಿಷ್ಣುಜಿತ್, ಬದಿಯಡ್ಕ ಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್ ಹಾಗೂ ಪಂಚಾಯಿತಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.