ಬದಿಯಡ್ಕ: ದೇಶಿಯ ಅಧ್ಯಾಪಕ ಪರಿಷತ್ತು ಎನ್‍ಟಿಯು ಕುಂಬಳೆ ಉಪಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳೊಂದಿಗೆ ಸಂಜೆ ಧರಣಿ ನಡೆಸಿತು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳ ಕಚೇರಿಯ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನು ಎನ್‍ಟಿಯು ರಾಜ್ಯ ಕಾರ್ಯದರ್ಶಿ ಪ್ರಭಾಕರ ನಾಯರ್ ಉದ್ಘಾಟಿಸಿ ಮಾತನಾಡಿ, ರಾಜ್ಯಸರ್ಕಾರವು ವಾರದ ಐದು ದಿನದ ಬದಲು ಆರು ದಿವಸ ಕೆಲಸಮಾಡಬೇಕೆಂಬ ಕಾನೂನನ್ನು ತಂದಿದ್ದು, ಅಧ್ಯಾಪಕರ ಸಮಸ್ಯೆಗಳಿಗೆ ಮೌನವಹಿಸಿರುವುದು ಖಂಡನೀಯ ಎಂದರು.
ಸರ್ಕಾರವು ಶನಿವಾರದ ಆರನೇ ದಿವಸವನ್ನಾಗಿ ಕೆಲಸದ ದಿನವನ್ನಾಗಿ ಮಾಡಿದೆ, ತುಟ್ಟಿ ಭತ್ಯೆಯನ್ನು ಮಂಜೂರುಗೊಳಿಸಲು, ಅಧ್ಯಾಪಕರಿಗಿರುವ ಲೀವ್ ಸರೆಂಡರ್‍ನ್ನು ಪುನಃ ಸ್ಥಾಪಿಸಲು ಹಾಗೂ ಇನ್ನಿತರ ಹಲವಾರು ಬೇಡಿಕೆಗಳನ್ನು ಮುಂದಿರಿಸಲಾಯಿತು. ಎನ್‍ಟಿಯು ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಸ್ವಾಗತಿಸಿದರು. ದಿನೇಶ್ ಮಾಸ್ತರ್, ಮಹಾಬಲ ಭಟ್ ಮಾತನಾಡಿದರು. ಉಪಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ವಂದಿಸಿದರು. ಬಳಿಕ ಉಪಜಿಲ್ಲಾ ವಿದ್ಯಾಧಿಕಾರಿಗಳಿಗೆ ಬೇಡಿಕೆಗಳ ಮನವಿಯನ್ನು ನೀಡಲಾಯಿತು.