ಲಖನೌ: ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮದರಸಾ ಮಂಡಳಿಯು ಇಂದು ಮದರಸಾಗಳಲ್ಲಿ ಯೋಗಾಭ್ಯಾಸಕ್ಕೆ ಆದೇಶಿಸಿತ್ತು. ಅದರಂತೆ ಮದರಾಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಮಾಡಿದ್ದಾರೆ.
ಲಖನೌ: ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮದರಸಾ ಮಂಡಳಿಯು ಇಂದು ಮದರಸಾಗಳಲ್ಲಿ ಯೋಗಾಭ್ಯಾಸಕ್ಕೆ ಆದೇಶಿಸಿತ್ತು. ಅದರಂತೆ ಮದರಾಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಮಾಡಿದ್ದಾರೆ.
ರಾಜಧಾನಿ ಲಖನೌನ ದಾರುಲ್ ಉಲೂಮ್ ವಾರ್ಸಿಯಾ ಮದರಸಾದಲ್ಲಿ ಯೋಗ ದಿನದ ನಿಮಿತ್ತ ಮದರಸಾ ವಿದ್ಯಾರ್ಥಿಗಳು ಯೋಗಾಭ್ಯಾಸ ಪ್ರದರ್ಶಿಸಿದರು. ಇದಕ್ಕಾಗಿ 400 ಪ್ರೋಗ್ರಾಮ್ ಹೆಡ್ಗಳನ್ನು ಮಾಡಲಾಗಿದೆ. ಉತ್ತರ ಪ್ರದೇಶ ಮದ್ರಸಾ ಮಂಡಳಿಯ ಆದೇಶದ ನಂತರ ಮಾನ್ಯತೆ ಪಡೆದ ಮದರಸಾಗಳಲ್ಲಿ ಯೋಗ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮದರಸಾ ವಿದ್ಯಾರ್ಥಿಗಳು ಯೋಗ ಮಾಡುವುದು ಒಳ್ಳೆಯದು. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಯುಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕುನ್ವರ್ ಬಸಿತ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ವಿಡಿಯೋ ಸಂದೇಶ
ನ್ಯೂಯಾರ್ಕ್: ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಇಂದು ಜಾಗತಿಕ ಚಳುವಳಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶದ ಜನತೆಗೆ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ.
ವಸುದೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವದಾದ್ಯಂತ ಕೋಟ್ಯಂತರ ಜನರು ಇಂದು ಯೋಗಾಭ್ಯಾಸ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು 'ಐತಿಹಾಸಿಕ' ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಯೋಗ ದಿನದ ಪ್ರಸ್ತಾಪ ಬಂದಾಗ, ಅದನ್ನು ದಾಖಲೆ ಸಂಖ್ಯೆಯ ದೇಶಗಳು ಬೆಂಬಲಿಸಿದವು ಎಂದರು ಹೇಳಿದರು.
ವಿಶ್ವಸಂಸ್ಥೆಯು ಜುಲೈ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಗುರುತಿಸಿದ ನಂತರ, ಯೋಗವು ಜಾಗತಿಕ ಚಳುವಳಿ ಮತ್ತು ಜಾಗತಿಕ ಚೈತನ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.