ಕಾಸರಗೋಡು: 'ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ 'ಪ್ರಥಮ ರ್ಯಾಂಕ್' ಕಾಸರಗೋಡು' ವತಿಯಿಂದ ವೃತ್ತಿ ಮಾರ್ಗದರ್ಶನ ತರಗತಿ ಕಾಸರಗೋಡು ಹೊಸಬಸ್‍ನಿಲ್ದಾಣ ಸನಿಹದ ಜಿಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಸಚಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಓ.ಎಂ.ಬಾಲಕೃಷ್ಣನ್ ಮಾಸ್ಟರ್, ಜಯನ್ ಕಾಡಗಂ, ಎನ್.ವಿ.ನಾರಾಯಣನ್ ಮತ್ತು ಶರತ್ ಕುಮಾರ್ ಪೆರುಂಬಳ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ.ಕರೀಂ ಸ್ವಾಗತಿಸಿದರು. ಕೋಶಾಧಿಕರಿ ಸಿ.ವಿ.ಗಿರೀಶನ್ ವಂದಿಸಿದರು. ನಿರ್ಮಲ್ ಕುಮಾರ್ ಕಾಡಗಂ ತರಗತಿ ನಡೆಸಿಕೊಟ್ಟರು. ತರಗತಿಯಲ್ಲಿ 280 ವಿದ್ಯಾರ್ಥಿಗಳು ಪಾಲ್ಗೊ0ಡಿದ್ದರು.