ತಿರುವನಂತಪುರಂ: ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಡಾ.ವಿ.ವೇಣು ಮತ್ತು ರಾಜ್ಯ ಪೋಲೀಸ್ ಮುಖ್ಯಸ್ಥರಾಗಿ ಶೇಖ್ ದರ್ವೇಶ್ ಸಾಹಿಬ್ ಅಧಿಕಾರ ಸ್ವೀಕರಿಸಿದ್ದಾರೆ.
ದರ್ಬಾರ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿ ವೇಣು ಅವರು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಪೋಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಪೋಲೀಸ್ ವರಿಷ್ಠಾಧಿಕಾರಿ ಅನಿಲ್ ಕಾಂತ್ ಅವರು ನೂತನ ಪೋಲೀಸ್ ವರಿಷ್ಠಾಧಿಕಾರಿ ಎಸ್ ದರ್ವೇಶ್ ಸಾಹಿಬ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಪೋಲೀಸ್ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ನಿವೃತ್ತಿ ಹೊಂದುತ್ತಿರುವ ಡಿಜಿಪಿ ಅನಿಲ್ ಕಾಂತ್ ಅವರ ಅಧಿಕೃತ ಬೀಳ್ಕೊಡುಗೆ ನಡೆಯಿತು. ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರು ಪೋಲೀಸ್ ಪ್ರಧಾನ ಕಚೇರಿಯ ಧೀರಸ್ಮೃತಿಭೂಮಿಯಲ್ಲಿ ಪುಷ್ಪ ಮಾಲೆಯನ್ನು ಹಾಕಿದ ನಂತರ ನೂತನ ಪೋಲೀಸ್ ಮುಖ್ಯಸ್ಥ ಎಸ್ ದರ್ವೇಶ್ ಸಾಹಿಬ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮಿತ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರನ್ನು ನೂತನ ಮುಖ್ಯಸ್ಥರು ಮತ್ತು ಹಿರಿಯ ಪೋಲೀಸ್ ಅಧಿಕಾರಿಗಳು ಬೀಳ್ಕೊಟ್ಟರು.
ಶೇಖ್ ದರ್ವೇಶ್ ಸಾಹಿಬ್ ಆಂಧ್ರಪ್ರದೇಶದ ಮೂಲದವರು. 1990ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ದರ್ವೇಶ್ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಮಹಾನಿರ್ದೇಶಕರಾಗಿದ್ದರು. ಕೇರಳ ಕೇಡರ್‍ನಲ್ಲಿ ಎಎಸ್‍ಪಿಯಾಗಿ ನೆಡುಮಂಗಾಡ್ ನಲಗಲಿ ಸೇವೆ ಪ್ರಾರಂಭವಾಯಿತು. ನಂತರ ಅವರು ವಯನಾಡ್, ಕಾಸರಗೋಡು, ಕಣ್ಣೂರು ಮತ್ತು ಪಾಲಕ್ಕಾಡ್‍ನಲ್ಲಿ ಎಸ್‍ಪಿಯಾಗಿ ಮತ್ತು ಎಂಎಸ್‍ಪಿ ಮತ್ತು ಕೆಎಪಿ 2 ನೇ ಬೆಟಾಲಿಯನ್‍ನಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು.
ಡಾ. ವಿ ವೇಣು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ನಂತರ ಅವರು ನಾಗರಿಕ ಸೇವೆಗೆ ಪ್ರವೇಶಿಸಿದರು. ಅವರು ಗೃಹ ಕಾರ್ಯದರ್ಶಿ ಸ್ಥಾನದಿಂದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದರು. ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಪ್ರಧಾನ ಕಾರ್ಯದರ್ಶಿ, ಅಬಕಾರಿ ಆಯುಕ್ತ, ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿ ಮತ್ತು ಕೇಂದ್ರ ಸಂಸ್ಕøತಿ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಮುಂತಾದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.