HEALTH TIPS

ಮಕ್ಕಳಿಗೆ ಚಾಕಲೇಟ್, ಐಸ್ ಕ್ರೀಮ್ ಅತಿಯಾಗಿ ಕೊಟ್ಟರೆ ಮಧುಮೇಹ ಬರುವುದೇ?

 ಇಡೀ ಜಗತ್ತಿನಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅದ್ರಲ್ಲೂ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗ್ತಿರೋದು ಗಾಬರಿ ಮೂಡಿಸಿದೆ. ಇತ್ತೀಚಿಗಂತೂ ಎರಡು ವರ್ಷದ ಮಕ್ಕಳಲ್ಲೂ ಈ ಸಕ್ಕರೆ ಕಾಯಿಲೆ ಪತ್ತೆಯಾಗುತ್ತಿದೆ. ಹೌದು, ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಹೆಚ್ಚಾಗ್ತಿರೋದಕ್ಕೆ ಪೋಷಕರು ಪರೋಕ್ಷವಾಗಿ ಕಾರಣವಾಗ್ತಿದ್ದಾರೆ ಅಂದ್ರೆ ತಪ್ಪಾಗೋದಿಲ್ಲ.

ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅವರಿಗೆ ಅಗತ್ಯ ಇರೋ ಆಹಾರಗಳನ್ನು ಸೇವಿಸೋದಿಲ್ಲ. ಅದರ ಬದಲಾಗಿ ಐಸ್ ಕ್ರೀಮ್, ಚಾಕಲೇಟ್, ಡೋನಟ್ ಗಳನ್ನೇ ಹೆಚ್ಚಾಗಿ ಸೇವನೆ ಮಾಡುತ್ತಾರೆ. ಮಕ್ಕಳು ಇದನ್ನೆಲ್ಲಾ ಇಷ್ಟ ಪಟ್ಟು ತಿನ್ನೋದ್ರಿಂದ ಪೋಷಕರು ಕೂಡ ಮಕ್ಕಳಿಗೆ ಇಂತಹ ಆಹಾರಗಳನ್ನೇ ಹೆಚ್ಚಾಗಿ ನೀಡುತ್ತಿದ್ದಾರೆ. ಅಷ್ಟಕ್ಕು ಮಕ್ಕಳಲ್ಲಿ ಹೆಚ್ಚಿನ ಸಕ್ಕರೆ ಸೇವನೆಯಿಂದ ಡಯಾಬಿಟೀಸ್ ಕಾಯಿಲೆ ಹೆಚ್ಚಾಗ್ತಿದ್ಯಾ ಅನ್ನೋದನ್ನು ತಿಳಿಯೋಣ.

ಮಕ್ಕಳಿಗೆ ಸಕ್ಕರೆಯ ಅಧಿಕ ಸೇವನೆ ಒಳ್ಳೆಯದಲ್ಲ ಯಾಕೆ?

ಮಕ್ಕಳು ಹೆಚ್ಚಾಗಿ ಸಕ್ಕರೆಯ ಅಂಶವಿರೋ ಪದಾರ್ಥಗಳನ್ನು ಸೇವನೆ ಮಾಡೋದ್ರಿಂದ ನಿಧಾನವಾಗಿ ಅವರ ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕವಾಗುತ್ತಾ ಸಾಗುತ್ತದೆ. ಇದರಿಂದ ಇನ್ಸುಲಿನ್ ನ ಅಪಾಯ, ಪ್ರಿಡಿಯಾಬಿಟಿಸ್ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಅತಿ ಹೆಚ್ಚಿನ ಸಕ್ಕರೆಯ ಸೇವನೆಯು ಮಕ್ಕಳ ಮನಸ್ಥಿತಿ ಹಾಗೂ ಅವರ ಚಟುವಟಿಕೆ ಮೇಲೂ ಪರಿಣಾಮ ಬೀರಬಹುದು. ಹಾಗಂತ ಸಕ್ಕರೆ ಅಂಶವಿರೋ ಪದಾರ್ಥಗಳನ್ನು ನೀಡೋದೇ ಬೇಡ ಅಂತ ನಾವು ಹೇಳುತ್ತಿಲ್ಲ. ಮಕ್ಕಳಿಗೆ ಹಣ್ಣುಗಳು, ಧಾನ್ಯಗಳು, ಬೀನ್ಸ್ ಮತ್ತು ಡೈರಿ ಉತ್ಪನ್ನಗಳನ್ನು ನೀಡಬಹುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ಮಕ್ಕಳ ಆರೋಗ್ಯಕ್ಕೆ ಉತ್ತಮವಾಗಿದೆ.

ಎಷ್ಟು ವಿಧದ ಡಯಾಬಿಟೀಸ್ ಗಳಿದೆ?

ನಮ್ಮಲ್ಲಿ ಹೆಚ್ಚಿನವರಿಗೆ ಕೇವಲ ಎರಡು ವಿಧದ ಮಧುಮೇಹದ ಬಗ್ಗೆ ಗೊತ್ತಿದೆ. ಇದು ಮಕ್ಕಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಅವುಗಳೆಂದರೆ ಟೈಪ್ 1 ಡಯಾಬಿಟಿಸ್ ಮತ್ತು ಟೈಪ್ 2 ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. ಇದನ್ನು ಮೊದಲು ವಯಸ್ಕರ ಮಧುಮೇಹ ಎಂದು ಕರೆಯಲಾಗುತ್ತಿತ್ತು.

ಆದರೆ ಮಕ್ಕಳಲ್ಲೂ ಕೂಡ ಟೈಪ್ 2 ಮಧುಮೇಹ ಅಭಿವೃದ್ಧಿಯಾಗುವ ಸಾಧ್ಯತೆಯಿದೆ.
ಮಧುಮೇಹದ ನಾಲ್ಕು ಹೊಸ ವಿಧಗಳು ಸೇರಿದೆ. ಅವುಗಳೆಂದರೆ :

  • ಯುವಕರಲ್ಲಿ ಮೆಚುರಿಟಿ ಆರಂಭದ ಮಧುಮೇಹ (Maturity onset diabetes of the young)
  • ಸ್ಟೀರಾಯ್ಡ್ ಪ್ರೇರಿತ ಮಧುಮೇಹ
  • ಸಿಸ್ಟಿಕ್ ಫೈಬ್ರೋಸಿಸ್ ಸಂಬಂಧಿತ ಮಧುಮೇಹ
  • ಟೈಪ್ 1.5 ಮಧುಮೇಹ

ಡಯಾಬಿಟೀಸ್ ಕಾಯಿಲೆ ಅನುವಂಶೀಯವಾಗಿ ಹರಡುತ್ತಾ?

ಹೆಚ್ಚಿನ ಪೋಷಕರು ಡಯಾಬಿಟಿಸ್ ತಮ್ಮಿಂದ ಮಕ್ಕಳಿಗೆ ಹರಡುತ್ತಾ ಅಂತ ಚಿಂತಿಸುತ್ತಾರೆ. ಟೈಪ್ 1 ಮಧುಮೇಹ ಮಾತ್ರ ಪೋಷಕರಿಂದ ಮಕ್ಕಳಿಗೆ ಹರಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಮಕ್ಕಳಲ್ಲಿ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಯಾಗಿದ್ದರೆ ಖಂಡಿತ ಅದರಲ್ಲಿ ಅವರು ಸೇವಿಸುವ ಆಹಾರ ಹಾಗೂ ಅವರ ತೂಕ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಪೋಷಕರು ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ಇದರಿಂದ ಮಕ್ಕಳಿಗೂ ಕೂಡ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿದೆ.

ಸಕ್ಕರೆ ಸೇವಿಸೋದ್ರಿಂದ ಡಯಾಬಿಟೀಸ್ ಬರೋದಿಲ್ವಾ?

ಸಾಮಾನ್ಯವಾಗಿ ಮಕ್ಕಳು ಅನಾರೋಗ್ಯಕ್ಕೆ ಒಳಗಾದ ನಾವು ವೈದ್ಯರ ಬಳಿ ಅನಾರೋಗ್ಯಕರ ಆಹಾರ ತಿಂದು ಹುಷಾರು ತಪ್ಪಿರಬಹುದಾ? ಎಂದು ಕೇಳುತ್ತೇವೆ. ಆದರೆ ಟೈಪ್ 1 ಮಧುಮೇಹ ಯಾವುದೇ ರೀತಿ ಆಹಾರ ಸೇವನೆಯಿಂದ ಉಂಟಾಗೋದಿಲ್ಲ. ಸಕ್ಕರೆ ಸೇವನೆಗೂ ಇದಕ್ಕೂ ಸಂಬಂಧವಿಲ್ಲ. ದೇಹವು ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಟೈಪ್ 1 ಮಧುಮೇಹ ಉಂಟಾಗುವ ಸಾಧ್ಯತೆಗಳಿದೆ.

ತೂಕ ಹೆಚ್ಚಾದರೆ ಟೈಪ್ 2 ಡಯಾಬಿಟಿಸ್ ಉಂಟಾಗುವ ಸಾಧ್ಯತೆಗಳಿದೆ. ಆರೋಗ್ಯಕರ ಆಹಾರಗಳು ಸೇವಿಸದೇ ಹೆಚ್ಚಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸುವ ಮಕ್ಕಳಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚಾಗಿದೆ. ಈ ಜಂಕ್ ಫುಡ್ ಗಳನ್ನು ತಿಂದು ತೂಕ ಹೆಚ್ಚಿಸಿಕೊಂಡ ಮಕ್ಕಳಲ್ಲಿ ಟೈಪ್ 2 ಡಯಾಬಿಟಿಸ್ ಕಂಡು ಬರುತ್ತದೆ.

ಟೈಪ್ 2 ಮಧುಮೇಹದಿಂದ ದೂರವಿರಲು ಈ ಆಹಾರ ಸೇವಿಸಲೇಬಾರದು!

ಅನಾರೋಗ್ಯಕರ ಆಹಾರ ಸೇವನೆಯಿಂದ ಮಕ್ಕಳಲ್ಲಿ ಟೈಪ್ 2 ಮಧುಮೇಹ ಕಾಣಿಸಿಕೊಳ್ಳೋದ್ರಿಂದ ಈ ಆಹಾರಗಳನ್ನು ಮಕ್ಕಳಿಗೆ ನೀಡಬೇಡಿ. ಅವುಗಳೆಂದರೆ :

  • ಜ್ಯೂಸ್, ಸೋಡಾ ಮತ್ತು ಇತರ ಸಿಹಿಯಾದ ಪಾನೀಯಗಳು
  • ಚಿಪ್ಸ್, ಕುಕೀಸ್ ಮತ್ತು ಇತರ ಅನಾರೋಗ್ಯಕರ ತಿಂಡಿಗಳು
  • ಬಿಳಿ ಬ್ರೆಡ್, ಅಕ್ಕಿ ಮತ್ತು ಪಾಸ್ತಾ ಇತ್ಯಾದಿ
  • ಹುರಿದ ಮತ್ತು ಜಂಕ್ ಆಹಾರ
  • ಕೆಂಪು ಮಾಂಸ
  • ಡೈರಿ ಉತ್ಪನ್ನಗಳು

ಮಧುಮೇಹ ಕಾಯಿಲೆ ಗುಣವಾಗುತ್ತಾ?

ಟೈಪ್ 1 ಮಧುಮೇಹ ಗುಣಮುಖವಾಗೋದಿಲ್ಲ ಎಂದು ಅಧ್ಯಯನಗಳಿಂದ ಸಾಭೀತು ಪಡಿಸಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಾಗುತ್ತಿದೆ. ಇನ್ನೂ ಟೈಪ್ 2 ಮಧುಮೇಹ ಕಾಯಿಲೆಯನ್ನು ಗುಣ ಪಡಿಸಬಹುದು. ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡೋದಕ್ಕೆ ವ್ಯಾಯಾಮ ಮಾಡಿ. ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡೋದ್ರಿಂದ ಟೈಪ್ 2 ಮಧುಮೇಹವನ್ನು ಗುಣಪಡಿಸಬಹುದು.

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಆರೋಗ್ಯಯುಕ್ತ ಆಹಾರಗಳನ್ನೇ ನೀಡಿ ಇಂತಹ ರೋಗಗಳು ಬಾರದಂತೆ ತಡೆಯಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries