ಮಂಜೇಶ್ವರ: ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜೂನ್ 24 ರಿಂದ ಜೂನ್ 30ರವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಉದ್ಘಾಟನೆ ಶ್ರೀಮದ್ ಎಡÀನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ವಿದ್ಯಾಸಂಸ್ಥೆಯ ನಾರಾಯಣೀಯಂ ವೇದಿಕೆಯಲ್ಲಿ ವಿಕಾಸ ಸಂಘಟನೆಯ ಆಶ್ರಯದಲ್ಲಿ ಶನಿವಾರ ದೀಪ ಬೆಳಗಿಸಿ ನೆರವೇರಿಸಿದರು.
ಗಡಿನಾಡು ಕಾಸರಗೋಡಿನಲ್ಲಿ ನಿತ್ಯ ಕನ್ನಡದ ಹಬ್ಬವಾಗಲಿ - ಎಡನೀರು ಶ್ರೀ
ಆಶಿರ್ವದಿಸಿ ಮಾತನಾಡಿದ ಎಡನೀರು ಶ್ರೀಗಳು ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ನಿತ್ಯ ಕನ್ನಡ ಹಬ್ಬ ನಡೆಯಲಿ, ಜಿಲ್ಲೆಯ ಗ್ರಾಮ ಗ್ರಾಮಗಳಲ್ಲೂ ಕನ್ನಡ ಧ್ವನಿ ಮೊಳಗುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು. ರಂಗ ಚಿನ್ನಾರಿ ಕಾಸರಗೋಡು ಸಂಸ್ಥೆ ಹಲವು ವರ್ಷಗಳಿಂದ ಕನ್ನಡದ ಸೇವೆಯನ್ನು ನಿರಂತರ ನಡೆಸುತ್ತಾ ಬಂದಿದೆ ಸಂಸ್ಥೆಯ ರೂವಾರಿಗಳಾದ ಕಾಸರಗೋಡು ಚಿನ್ನಾ ಹಗೂ ತಂಡದ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಶಾಲಾ ಸಂಚಾಲಕಿ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಲೇಖಕ, ಸಾಹಿತಿ ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಸುವಲ್ಲಿ ಗಡಿನಾಡಲ್ಲಿ ಇನ್ನಷ್ಟು ಕನ್ನಡದ ಕಾರ್ಯ ನಡೆಯಲಿ, ಮನೆ ಮನಗಳಲ್ಲಿ ಕನ್ನಡವನ್ನು ಪ್ರೀತಿಸುವ ಪೋಷಿಸುವ ಹಾಗೆ ಆದಾಗ ಇಂತಹ ಕಾರ್ಯಗಳು ಸಾರ್ಥಕ್ಯವನ್ನು ಪಡೆಯುತ್ತದೆ ರಂಗ ಚಿನ್ನಾರಿ ಯವರ ಕಾರ್ಯಕ್ಕೆ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ವಿದ್ಯಾವರ್ಧಕ ಎ ಯು ಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್ ಆರ್ ಎಂ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಹಾಗೂ ಸತ್ಯನಾರಾಯಣ ಕೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಆಶ್ರಮದ ಶ್ಥಾಪಕ ಡಾ. ಉದಯಕುಮಾರ್ ನೂಜಿ ಯವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಗಾಯಕ ಕಿಶೋರ್ ಪೆರ್ಲ ಅವರು ಪ್ರಾರ್ಥನೆ ಹಾಡಿದರು. ಅಧ್ಯಾಪಕ ರಾಜಾರಾಮ ರಾವ್ ಮೀಯಪದವು ನಿರೂಪಿಸಿದರು. ವಿಕಾಸ ಸಂಸ್ಥೆಯ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ಕಾಸರಗೋಡು ಚಿನ್ನಾ ಪ್ರಸ್ತಾವಿಕ ಮಾತುಗಳನ್ನಾಡಿ ಕಾಸರಗೋಡು ಕನ್ನಡ ಹಬ್ಬದ ಮಹತ್ವವನ್ನು ತಿಳಿಸಿದರು.
“ಮುಂದಿನ ವರ್ಷದಿಂದ ಪ್ರತೀವರ್ಷ ಎಪ್ರಿಲ್ ತಿಂಗಳಲ್ಲಿ ಕಾಸರಗೋಡು ಕನ್ನಡ ಹಬ್ಬ ಸಪ್ತಾಹ ಜಿಲ್ಲೆಯಾದ್ಯಂತ ನಾಡ ಹಬ್ಬವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಈ ಸಂದರ್ಭ ಘೋಷಿಸಿದರು.”
ಬಳಿಕ ವಿಕಾಸ ಮೀಯಪದವು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡನೀರು ಸಂಸ್ಥೆಯ ಸಂಯೋಜನೆಯಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಜರಗಿತು.