ಬೆಂಗಳೂರು: ಯೋಗ ದಿನದಂದು ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ಯೋಗಾಭ್ಯಾಸ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ಯೋಗ ದಿನದಂದು ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ಯೋಗಾಭ್ಯಾಸ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸದ್ಯ ಸುಲ್ತಾನ್ ಅಲ್ ನೆಯಾಡಿ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ (ISS) ವಾಸಿಸುತ್ತಿದ್ದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾವು ಯೋಗ ಮಾಡುವ ಫೋಟೊವನ್ನು ಟ್ವೀಟ್ ಮಾಡಿ, ಇಂದು ಅಂತರಾಷ್ಟ್ರೀಯ ಯೋಗ ದಿನ. ಇಲ್ಲಿ ನಾನು ಸ್ವಲ್ಪ ಯೋಗವನ್ನು ಅಭ್ಯಾಸ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ಯೋಗವು ನನ್ನ ನೆಚ್ಚಿನ ಚಟುವಟಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.