ಕುಂಬಳೆ: ದೈಹಿಕ ಸದೃಢತೆಯ ಜೊತೆ ಮಾನಸಿಕ ಆರೋಗ್ಯದ ಹಿತದೃಷ್ಟಿಯಲ್ಲಿಯೂ ಯೋಗಕ್ಕೆ ಅತೀ ಪ್ರಾಶಸ್ತ್ಯ ಇದೆ ಎಂದು ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದ ಸಂಚಾಲಕ ಶೇಂತಾರು ನಾರಾಯಣ ಭಟ್ ಹೇಳಿದರು.
ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ಬುಧವಾರ ನಡೆದ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಸಹ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಭ್ಯಾಸದ ಮಹತ್ವವನ್ನು ಅರಿತು ಯೋಗ ಅಳವಡಿಸಿಕೊಳ್ಳುವುದನ್ನು ಅಭ್ಯಸಿಸಬೇಕು ಎಂದು ಕರೆನೀಡಿದರು.
ಶಿಕ್ಷಕಿ ಜಯಶ್ರೀ ಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿನಿ ಕುಮಾರಿ ತನ್ವಿ ಯೋಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.