ಬದಿಯಡ್ಕ: ನವಜೀವನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವಗಾತರನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಶಾಲಾ ಪ್ರವೇಶೋತ್ಸವ ಗುರುವಾರ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಉದ್ಘಾಟಿಸಿ ನವಜೀವನ ಶಾಲೆ ಜಿಲ್ಲೆಯ ಅತ್ಯಂತ ಪುರಾತನ ಶಾಲೆಯಾಗಿದೆ. ಇಲ್ಲಿ ಕಲಿಯಲು ದೊರಕಿರುವುದು ನಿಮ್ಮೆಲ್ಲರ ಭಾದ್ಯ. ಇದರ ಸದುಪಯೋಗನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯನಿ ಮಿನಿ ಟೀಚರ್, ಹಿರಿಯ ಅಧ್ಯಾಪಕಿಯರಾದ ಊರ್ಮಿಳಾ ಟೀಚರ್, ಪ್ರಭಾವತಿ ಟೀಚರ್ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಜರಗಿತು. ಹೆಸರಾಂತ ಜಾದುಗಾರ ಶ್ರೀಧರ ಅಡೂರು ಅವರಿಂದ ಜಾದು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು. ರಾಜೇಶ್ ಮಾಸ್ತರ್, ವಿದ್ಯಾ ಟೀಚರ್, ಕೃಷ್ಣಕುಮಾರ್, ತಂಗಮಣಿ ಟೀಚರ್ ಉಪಸ್ಥಿತರಿದ್ದರು. ಜ್ಯೋತ್ಸ್ನಾ ಕಡಂದೆಲು ಸ್ವಾಗತಿಸಿ, ನಿರಂಜನ್ ರೈ ಪೆರಡಾಲ ವಂದಿಸಿದರು. ದಿವ್ಯ ಟಿಚರ್ ಕಾರ್ಯಕ್ರಮ ನಿರ್ವಹಿಸಿದರು.