ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಮಗವಾಘಿ ಜೂ.5ರಂದು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆಯುವ ವನಮಹೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಶಾಸಕರು ಹಾಗೂ ಜಿಪಂ ಅಧ್ಯಕ್ಷರುಪಾಲ್ಗೊಳ್ಳಲಿದ್ದಾರೆ. ಶಾಸಕ ಇ ಚಂದ್ರಶೇಖರನ್ ಕಾಂಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಸಿಎಚ್ ಕುಞಂಬು ಅವರು ಪೆರಿಯ ಸರ್ಕಾರಿ ಪ್ರೌಢಶಾಲೆ, ಎನ್ ಎ ನೆಲ್ಲಿಕುನ್ನು ಅವರು ಚೆಮ್ನಾಡ್ ಪ್ರೌಢಶಾಲೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಜಿಎಚ್‍ಎಸ್‍ಎಸ್ ಚಾಯೋತ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸುವರು. ಜೂನ್ 6 ರಂದು ಶಾಸಕ ಎಂ. ರಾಜಗೋಪಾಲನ್ ಅವರು ಕೈಯೂರು ಜಿವಿ ಎಚ್‍ಎಸ್‍ಎಸ್‍ನಲ್ಲಿ ಮತ್ತು ಎಕೆಎಂ ಅಶ್ರಫ್ ಅವರು ಕುಂಜತ್ತುರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾರಂಭ ಉದ್ಘಾಟಿಸುವರು.
ಜಿಲ್ಲಾ ಕೃಷಿ, ತೋಟಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜತೆಗೆ ಎಸ್‍ಪಿಸಿಯ ಜಿಲ್ಲಾ ಕಚೇರಿಯ ನಿರ್ದೇಶನದ ಮೇರೆಗೆ ಜಿಲ್ಲಾ ಪೆÇಲೀಸ್ ವಿಭಾಗದಲ್ಲಿ ಮಧುರ ಅರಣ್ಯ ಯೋಜನೆಯನ್ನು ಸಹ ಅನುಷ್ಠಾನಗೊಳಿಸಲಾಗುವುದು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ಉದ್ಘಾಟಿಸುವರು.ಜವವವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳಲ್ಲಿ ನೆಟ್ಟುಬೆಳೆಸುವ ನಿಟ್ಟಿನಲ್ಲಿ ನಾಯಮರ್‍ಮೂಲೆ ಟಿಐಎಚ್‍ಎಸ್‍ಎಸ್‍ನ ಎಸ್‍ಪಿಸಿ ಶಾಲೆಯ ಎಸ್‍ಪಿಸಿ ಕೆಡೆಟ್‍ಗಳಿಗೆ ಬೇಳ, ಅದೂರು, ಕರಂದಕ್ಕಾಡಿನಲ್ಲಿರುವ ರಾಜ್ಯ ಸೀಡ್ ಫಾರ್ಮ್ ಮತ್ತು ಪುಲ್ಲೂರ್ ನರ್ಸರಿಯಿಂದ ಸಂಗ್ರಹಿಸಿದ ಸಸಿಗಳ ವಿತರಣೆಯನ್ನು ಜಿಲ್ಲಾ ಹೆಚ್ಚುವರಿ ಎಸ್‍ಪಿ. ಪಿ.ಕೆ.ರಾಜು ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಸ್‍ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ನಾರ್ಕೋಟಿಕ್ಸ್ ಸೆಲ್ ಡಿವೈಎಸ್‍ಪಿ ಎಂ.ಎ.ಮ್ಯಾಥ್ಯೂ, ಎಂ.ಸದಾಶಿವನ್, ಟಿ.ಗಿರೀಶ್ ಕುಮಾರ್, ಎ.ಪಿ.ಸುರೇಶ್, ಎಸ್‍ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಟಿ. ತಂಬಾನ್, ಇಲ್ಯಾಸ್ ಮಾಸ್ಟರ್ ಉಪಸ್ಥಿತರಿದ್ದರು.