ಕುಂಬಳೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಭಾಗವಾಗಿ ಬಿಜೆಪಿ ಕುಂಬಳೆ ಮಂಡಲ ಸಮಿತಿಯ ಆಶಯದಲ್ಲಿ ಯೋಗ ಕಾರ್ಯಕ್ರಮ ಕುಂಬಳೆ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ವಹಿಸಿದ್ದರು. ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಕ್ಯಾಪ್ಟನ್ ಕೆ.ಎನ್ ಪಿಳ್ಳೆ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಮಟ್ಟದ ಯೋಗ ಚಾಂಪಿಯನ್ ಬಿಧುನ್ ಬಿಜು ಅವರನ್ನುಸನ್ಮಾನಿಸಲಾಯಿತು. ಅವರ ಯೋಗ ಪ್ರದರ್ಶನದ ನಂತರ ಯೋಗ ಗುರು ಸಂಜೀವ ಭಂಡಾರಿ ಅವರ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು. ಕುಂಬಳೆ ದಕ್ಷಿಣ ವಲಯ ಸಮಿತಿಯ ಅಧ್ಯಕ್ಷ ಸುಜಿತ್ ರೈ ಸ್ವಾಗತಿಸಿ, ಜಿತೇಶ್ ನಾಯ್ಕಾಪು ವಂದಿಸಿದರು.