ಕೋಝಿಕ್ಕೋಡ್: ಕೋಯಿಕ್ಕೋಡ್‍ನ ಸ್ಟೋನ್‍ಮೇನ್ ಸಚಿನ್ ಅವರು ದಕ್ಷಿಣ ಏಷ್ಯಾದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ದೇಶಕ್ಕಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.
ಸಚಿನ್ ಮುಂದಿನ ತಿಂಗಳು ಮಾಲ್ಡೀವ್ಸ್‍ನಲ್ಲಿ ಪುರುಷರ ಕ್ರೀಡಾ ಫಿಸಿಕ್‍ನಲ್ಲಿ ಭಾಗವಹಿಸಲಿದ್ದಾರೆ. ಆದರೆ ಸಚಿನ್ ಗೆ ಒಂದೂವರೆ ಲಕ್ಷ ರೂ.ಬೇಕಾಗಲಿದೆ. ಈ ಬಾರಿ ಪತ್ನಿಯ ಕಿವಿಯ ಆಭರಣ ಸೇರಿದಂತೆ 50 ಸಾವಿರ ರೂ. ಪಾವತಿಸಿ ಅರ್ಹತೆ ಪಡೆದಿದ್ದಾರೆ. ಹೆಚ್ಚು ಹಣ ಸಿಗದಿದ್ದರೆ ಬೈಕ್ ಮಾರಾಟ ಮಾಡಲು ಸಚಿನ್ ನಿರ್ಧರಿಸಿದ್ದಾರೆ.
ಸಚಿನ್ ಹೊರತಾಗಿ ಇನ್ನಿಬ್ಬರು ಆಟಗಾರರು ಕೂಡ ಪಂದ್ಯದಲ್ಲಿ ಇದ್ದಾರೆ. ದಕ್ಷಿಣ ಏμÁ್ಯದ ನಂತರ, ಏಷ್ಯನ್ ಬಾಡಿ ಬಿಲ್ಡಿಂಗ್ ಇದೆ. ಇದರ ನಂತರ, ವಿಶ್ವ ಚಾಂಪಿಯನ್‍ಶಿಪ್ ಇದೆ. ಇದೆಲ್ಲದಕ್ಕೂ ಸ್ಪರ್ಧಿಸಲು ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಕ್ರೀಡಾಭಿಮಾನಿಗಳು ತಮ್ಮ ಬೆಂಬಲಕ್ಕೆ ಬರುತ್ತಾರೆ ಎಂದು ಸಚಿನ್ ಹಾರೈಸಿದ್ದಾರೆ.
ಸಚಿನ್ ಕೋಝಿಕ್ಕೋಡ್‍ನ ಎಲತ್ತೂರ್ ಚೆಟ್ಟಿಕುಳಂ ಪುಟಂಕುಟ್ಟಿಯಲ್ಲಿ ಮೀನುಗಾರ ರಾಮಚಂದ್ರನ್ ಮತ್ತು ಶ್ರೀಜಾಮಣಿ ದಂಪತಿಯ ಪುತ್ರ. ಸಂಸಾರದ ಸಂಕಷ್ಟದಿಂದ ಸಚಿನ್ ಓದು ಮುಗಿಸದೆ ಪ್ಲಸ್ ಟು ಮುಗಿಸಿ ಕೂಲಿಕೆಲಸದಲ್ಲಿ ತೊಡಗಿಸಿಕೊಂಡವರು. ಸಚಿನ್ ಮುಂದೆ ಬಾಡಿ ಬಿಲ್ಡಿಂಗ್‍ನ ಹಾದಿಯನ್ನು ಆಯ್ಕೆಮಾಡುವ ಮೂಲಕ ತಮ್ಮ ಆಸಕ್ತಿಯ ಕ್ಷೇತ್ರಕ್ಕೆ ಮನಮಾಡಿದರು. ಕೆಲಸದ ಸಮಯದಲ್ಲಿ ಕಲ್ಲಿನ ಕೋರೆಯ ಶ್ರಮ ಒಂದುಹಂತದಲ್ಲಿ ಸಚಿನ್ ಗೆ ನೆರವಾಯಿತು. ಇದೇ ವೇಳೆ ಆಕ್ಸಿಜನ್ ಬಾಡಿ ಫಿಟ್ ನೆಸ್ ಮಾಲೀಕ ಗಿರೀಶ್ ಸಚಿನ್ ಗೆ ಬಾಡಿ ಬಿಲ್ಡಿಂಗ್ ಗೆ ಮಾರ್ಗದರ್ಶನ ನೀಡುತ್ತಿದ್ದರು. ಸೌತ್ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿ ಪದಕ ಗೆದ್ದ ನಂತರ ಕ್ರೀಡಾ ಕೋಟಾದಲ್ಲಿ ಉದ್ಯೋಗ ಪಡೆಯುವುದು ಸಚಿನ್ ಕನಸು.