ಬದಿಯಡ್ಕ: ಕನ್ನೆಪ್ಪಾಡಿ ಶಾರದಾ ಶಿಶುಮಂದಿರದ ಪ್ರವೇಶೋತ್ಸವ ಶುಕ್ರವಾರ ಜರಗಿತು. ಆಶ್ರಮದ ಪ್ರಧಾನ ಕಾರ್ಯದರ್ಶಿ ನಿವೃತ್ತ ಅಧ್ಯಾಪಕ ಶಿವಶಂಕರ ಭಟ್ ಗುಣಾಜೆ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಸ್ಕಾರವಂತ ಜೀವನ ಬಾಲ್ಯದಲ್ಲಿ ಮಕ್ಕಳಲ್ಲಿ ಬೆಳೆಯಬೇಕು. ಪ್ರತೀ ಮನೆಯೂ ಸನಾತನ ಸಂಸ್ಕಾರಕ್ಕೆ ಪೂರಕವಾಗಿ ನಡೆದುಕೊಂಡಾಗ ಅದು ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು.
ಜೊತೆಕಾರ್ಯದರ್ಶಿ ರಮೇಶ್ ಕಳೇರಿ ಸ್ವಾಗತಿಸಿ, ಶಿಶುಮಂದಿರದ ಅಧ್ಯಾಪಿಕೆ ಸವಿತಾ ವಂದಿಸಿದರು.