ಸೊಂಪಾದ ಕೂದಲು ನಮ್ಮ ನಮ್ಮ ಸೌಂದರ್ಯಕ್ಕೆ ಮೆರಗು ಎಂಬುವುದರಲ್ಲಿ ನೋ ಡೌಟ್. ಈ ಕಾರಣಕ್ಕೆ ಕೂದಲು ಉದುರಲಾರಂಭಿಸಿದಾಗ ನಮ್ಮ ಮುಖದ ಆಕರ್ಷಣೆ ಕೂಡ ಬದಲಾಗುವುದು, ಇತ್ತೀಚಿನ ವರ್ಷಗಳಲ್ಲಿ ಈ ಕೂದಲು ಉರುವುದು ಎಂಬುವುದು ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ.
ಅನೇಕ ಕಾರಣಗಳಿಂದಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಅದರಲ್ಲೊಂದು ಪೋಷಕಾಂಶಗಳ ಕೊರತೆ. ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲಿನ ಬುಡ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೆಲವೊಂದು ಸಪ್ಲಿಮೆಂಟ್ಸ್ ದೊರೆಯುತ್ತದೆ, ಇದು ಕೂದಲಿನ ಬುಡ ಬಲವಾಗಿಸಿ ಕೂದಲು ಉದುರುವುದನ್ನು ತಡೆಗಟ್ಟಲು ತುಂಬಾನೇ ಪರಿಣಾಮಕಾರಿ. ಆ ಸಪ್ಲಿಮೆಂಟ್ಸ್ ಬಗ್ಗೆ ನೋಡುವುದಾದರೆಬಯೋಟಿನ್ ಸಪ್ಲಿಮೆಂಟ್ಸ್ (Biotin Supplement) ಈ ಸಪ್ಲಿಮೆಂಟ್ಸ್ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಪುರುಷರು ಹಾಗೂ ಮಹಿಳೆಯರು ತೆಗೆದುಕೊಳ್ಳಬಹುದು. ಇದರಲ್ಲಿ ಬಯೋಟಿನ್, ವಿಟಮಿನ್ಸ್, ಖನಿಜಾಂಶಗಳಿರುವುದರಿಂದ ಕೂದಲಿನ ಬುಡ ಬಲವಾಗಿಸುತ್ತದೆ.
ಗಮ್ಮೀಸ್
ಗಮ್ಮೀಸ್ ಕೂಡ ಕೂದಲು ಉದುರುವುದನ್ನು ತಡೆಟಗಟ್ಟುವಲ್ಲಿ ಪರಿಣಾಮಕಾರಿಯಾದ ಸಪ್ಲಿಮೆಂಟ್ಸ್ ಆಗಿದೆ. ಇದರಲ್ಲಿ ಬಯೋಟಿನ್, ವಿಟಮಿನ್ ಎ ಮತ್ತು ಇದ್ದು ಇದನ್ನು ಬಳಸುವುದರಿಂದ ಪೋಷಕಾಂಶದ ಕೊರತೆಯಿಂದ ಕೂದಲು ಉದುರುತ್ತಿದ್ದರೆ ಕೂದಲು ಉದುರುವ ಸಮಸ್ಯೆಗೆ ಗುಡ್‌ಬೈ ಹೇಳಬಹುದು.
ಬಯೋಟಿನ್ ಹೇರ್ ಗಮ್ಮೀಸ್: ಈ ಸಪ್ಲಿಮೆಂಟ್ಸ್ ಕೂಡ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ತುಂಬಾನೇ ಪರ್ಫೆಕ್ಟ್ ಆಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಕೂದಲಿನ ಬುಡ ಬಲವಾಗುವುದು.
ಕೂದಲಿಗೆ ಈ ಬಗೆಯ ವಿಟಮಿನ್ಸ್ ಕೂಡ ಅವಶ್ಯಕ
ವಿಟಮಿನ್ ಬಿ
ಬಯೋಟಿನ್ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಅದರ ಜೊತೆಗೆ ಫೋಲೆಟ್ ಹಾಗೂ ವಿಟಮಿನ್ ಬಿ 12 ಕೂದಲಿನ ಆರೋಗ್ಯಕ್ಕೆ ಅವಶ್ಯಕ.
ವಿಟಮಿನ್
ವಿಟಮಿನ್ ಸಿ ಕೆರಾಟಿನ್ ಉತ್ಪತ್ತಿಗೆ ಸಹಕಾರಿ. ಇದು ಕೆರಾಟಿನ್ ಉತ್ಪತ್ತಿಗೆ ಸಹಕಾರಿ, ಕೂದಲಿನ ಬುಡ ಬಲವಾಗಲು, ಕೂದಲಿನ ಬುಡ ದೇಹದಿಂದ ಕಬ್ಬಿಣದಂಶ ಹೀರಿಕೊಳ್ಳಲು, ಆಕ್ಸಿಡೇಟಿವ್ ಸ್ಟ್ರೆಸ್‌ನಿಂದ ಕೂದಲನ್ನು ರಕ್ಷಿಸಲು ಈ ಕೆರಾಟಿನ್ ಅವಶ್ಯಕ.
ಕಬ್ಬಿಣದಂಶ
ಕೂದಲಿನ ಆರೋಗ್ಯಕ್ಕೆ ಕಬ್ಬಿಣದಂಶ ಕೂಡ ಅವಶ್ಯಕ. ಕಬ್ಬಿಣದಂಶ ಕೊರತೆ ಉಂಟಾದರೆ ರಕ್ತಹೀನತೆ ಉಂಟಾಗುವುದು, ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು.
ಸತು: ಸತು ಕೂಡ ಮತ್ತೊಂದು ಖನಿಜಾಂಶವಾಗಿದೆ. ನೀವು ನಿಮ್ಮ ಆಹಾರಕ್ರಮದಲ್ಲಿ ಸತುವಿನಂಶವಿರುವ ಆಹಾರ ಸೇವಿಸಿ ಅಥವಾ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ.
ಕೊನೆಯದಾಗಿ: ಎಲ್ಲಾ ಸಪ್ಲಿಮೆಂಟ್ಸ್ ನೀವು ಸ್ವಂತ ತೆಗೆದುಕೊಳ್ಳಬೇಡ, ತಜ್ಞರನ್ನು ಭೇಟಿಯಾಗಿ ಅವರು ನಿಮಗೆ ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ಹೇಗೆ ಸೇವಿಸಬೇಕು ಎಂಬುವುದರ ಬಗ್ಗೆ ನಿಖರ ಮಾಹಿತಿ ನೀಡುತ್ತಾರೆ. ನೀವು ಅವರ ಸಲಹೆ ಪಡೆಯಲು ಹೋದಾಗ ಇತರ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಈ ಕುರಿತು ಅವರಿಗೆ ತಿಳಿಸಿ. ಅವರು ನಿಮ್ಮ ಆರೋಗ್ಯ ಸ್ಥಿತಿ ತಿಳಿದುಕೊಂಡು ನಿಮಗೆ ಸೂಕ್ತವಾದ ಸಪ್ಲಿಮೆಂಟ್ಸ್ ಸೂಚಿಸುತ್ತಾರೆ.