HEALTH TIPS

ನಾಳೆಯಿಂದ ಮೋದಿ ಅಮೆರಿಕ ಪ್ರವಾಸ

             ವದೆಹಲಿ (PTI): ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ದಿನಗಳ ಅಮೆರಿಕ ಪ್ರವಾಸ ಹಲವು ನಿರೀಕ್ಷೆ ಮೂಡಿಸಿದೆ. ರಕ್ಷಣಾ ಕ್ಷೇತ್ರ, ಉದ್ಯಮ ವಲಯದಲ್ಲಿ ಸಹಕಾರ, ಪೂರೈಕೆ ವ್ಯವಸ್ಥೆ ಆಬಾಧಿತವಾಗಿರುವಂತೆ ಪ್ರಗತಿಗೆ ನೀಲನಕ್ಷೆ ರೂಪಿಸುವುದು ಆದ್ಯತಾ ಪಟ್ಟಿಯಲ್ಲಿವೆ.

              ಪ್ರಧಾನಿ ಅವರ ಪ್ರವಾಸ ಇದೇ 21ರಂದು ಆರಂಭವಾಗಲಿದೆ. ಭೇಟಿ ಅವಧಿಯಲ್ಲಿ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಬಾಂಧವ್ಯ ಹಾಗೂ ಸಂವಹನ, ಬಾಹ್ಯಾಕಾಶ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಪಾಲುದಾರಿಕೆ ವೃದ್ಧಿ ಕುರಿತು ಚರ್ಚಿಸುವರು.

             ಸುದ್ದಿಗೋಷ್ಠಿಯಲ್ಲಿ ಸೋಮವಾರ ಪ್ರಧಾನಿ ಪ್ರವಾಸದ ವಿವರ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್‌ ಕ್ವಾತ್ರಾ ಅವರು, 'ಅಮೆರಿಕ ಪ್ರವಾಸ ಬಳಿಕ ಪ್ರಧಾನಿ ಅವರು ಈಜಿಪ್ಟ್‌ಗೆ ಎರಡು ದಿನಗಳ ಭೇಟಿಗಾಗಿ ಇದೇ 24ರಂದು ತೆರಳುವರು' ಎಂದು ತಿಳಿಸಿದರು.

                 'ಪ್ರವಾಸದ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ರಕ್ಷಣಾ, ಕೈಗಾರಿಕೆ ಕ್ಷೇತ್ರದ ಸಹಕಾರ ಕುರಿತಂತೆ ನೀಲನಕ್ಷೆ ಸಿದ್ಧವಾಗುವ ಸಾಧ್ಯತೆಯಿದೆ. ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ಪ್ರಮುಖ ಅಡಿಪಾಯವಾಗಿದೆ. ಹೀಗಾಗಿ, ಈ ಕ್ಷೇತ್ರದ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಲು ಆದ್ಯತೆ ನೀಡಲಾಗುತ್ತದೆ' ಎಂದು ತಿಳಿಸಿದರು.

             'ರಕ್ಷಣಾ ಕ್ಷೇತ್ರದಲ್ಲಿನ ಎರಡು ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಕೂಲಂಕಷವಾಗಿ ಗಮನಿಸಿದರೆ, ಸಂಬಂಧ ಹೆಚ್ಚು ಬಲಗೊಂಡಿದೆ ಮತ್ತು ಉಜ್ವಲವಾಗಿದೆ ಎಂಬುದು ತಿಳಿಯಲಿದೆ. ನಾವು ಒಟ್ಟುಗೂಡಿ ಹಲವು ದ್ವಿಪಕ್ಷೀಯ ಸೇನಾ ತಾಲೀಮು ನಡೆಸಿದ್ದೇವೆ. ಅಮೆರಿಕದ ರಕ್ಷಣಾ ಪರಿಕರಗಳಿಗೆ ಭಾರತ ವೇದಿಕೆಯೂ ಆಗಿದೆ. ಕೆಲವು ಪರಿಕರಗಳನ್ನು ಭಾರತ ಈಗಾಗಲೇ ಬಳಸುತ್ತಿದೆ' ಎಂದು ಕ್ವಾತ್ರಾ ಹೇಳಿದರು.

             ಮೋದಿ ಅವರು 21ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ವಾಷಿಂಗ್ಟನ್‌ಗೆ ತೆರಳಲಿದ್ದು, ಅಧ್ಯಕ್ಷ ಜೋ ಬೈಡನ್‌ ದಂಪತಿಯನ್ನು ಭೇಟಿಯಾಗುವರು.

                22ರಂದು ಶ್ವೇತಭವನದಲ್ಲಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಅದೇ ದಿನ ಉಭಯ ನಾಯಕರ ನಡುವೆ ಮಾತುಕತೆ ನಡೆಯಲಿದೆ. 23 ರಂದು ಪ್ರಮುಖ ಕಂಪನಿಗಳ ಸಿಇಒಗಳು ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಜೊತೆಗೆ ಚರ್ಚಿಸುವರು.

             ಬಳಿಕ, ವಾಷಿಂಗ್ಟನ್‌ನ ರೇಗನ್‌ ಸೆಂಟರ್‌ನಲ್ಲಿ ಆಹ್ವಾನಿತರಾಗಿರುವ ಭಾರತ ಮೂಲಕ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡುವರು.

               'ಎರಡು ರಾಷ್ಟ್ರಗಳ ಬಾಂಧವ್ಯದಲ್ಲಿ ಮೋದಿ ಅವರ ಈ ಭೇಟಿ ದಾಖಲೆ ಆಗಲಿದೆ. ಬಹು ಮುಖ್ಯ, ಮಹತ್ವದ ಭೇಟಿ ಇದಾಗಿದೆ. ವಿಶಾಲ ಮತ್ತು ಆಳವಾದ ಆಸಕ್ತಿಯನ್ನು ಹೊಂದಿದ್ದಾಗಿದೆ' ಎಂದು ಕ್ವಾತ್ರಾ ಬಣ್ಣಿಸಿದರು. 2014ರ ಬಳಿಕ ಮೋದಿ ಅಮೆರಿಕಕ್ಕೆ 6 ಬಾರಿ ಭೇಟಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries