ಕಾಸರಗೋಡು: ಉದುಮ ಎರೋಳ್ ಅಂಬಲತ್ತಿಕಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಅರವತ್ ಕೆ.ಯು.ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. 3.49 ರಿಂದ 4.32 ರವರೆಗೆ ದೇವಪ್ರತಿಷ್ಠೆ, ವಿವಿಧ ಕಲಶಾಭಿಷೇಕ, ಗುಳಿಗ ಪ್ರತಿಷ್ಠೆ ನಡೆಯಿತು.
ನಂತರ ವಿವಿಧ ಅಭಿಷೇಕ, ಪೂಜೆಗಳು ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮುಲ್ಲಚೇರಿ ಸಾವಿತ್ರಿ ಬಾಲಕೃಷ್ಣನ್ ಅವರಿಂದ ಹರಿನಾಮ ಕೀರ್ತನಾಲಾಪನೆ, ಕ್ಷೇತ್ರದ ಮಾತೃ ಸಮಿತಿಯಿಂದ ವಿಷ್ಣು ಸಹಸ್ರನಾಮಾರ್ಚನೆ ಹಾಗೂ ಸೆವೆನ್ ಮೈಲ್ ನಾದ ಬ್ರಹ್ಮಂ ವಾದ್ಯಮೇಳದಿಂದ ಭಕ್ತಿ ಗಾನಮೃತ ಕಾರ್ಯಕ್ರಮ ಜರುಗಿತು.