ತಿರುವನಂತಪುರಂ: ಕೆಪಿಸಿಸಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ. ಪ್ರಾಚ್ಯವಸ್ತು ಸಂಗ್ರಾಹಕ, ವಿವಾದಿತ ಆರೋಪಿ ಮೊನ್ಸನ್ ಮಾವುಂಕಲ್ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧವಾಗಿರುವುದಾಗಿ ಸುಧಾಕರನ್ ಘೋಷಿಸಿದ್ದರು.
ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ನಿನ್ನೆ ಪ್ರತಿಕ್ರಿಯಿಸಿದ್ದರು. ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧಿತರಾದ ಬಳಿಕ ರಾಜೀನಾಮೆ ನೀಡಲು ಮುಂದಾಗಿದ್ದರೂ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ನಿರ್ಧಾರ ಬದಲಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ದೂರ ಉಳಿಯಲು ನಿರ್ಧರಿಸಿದ್ದೆ. ಆದರೆ ನಾಯಕರು ರಾಜೀನಾಮೆ ನೀಡದಂತೆ ತಿಳಿಸಿದರು. ಮತ್ತು ಆ ಅಧ್ಯಾಯ ಮುಕ್ತಾಯಗೊಂಡಿದೆ ಎಂದು ಸುಧಾಕರನ್ ತಿಳಿಸಿರುವರು.
ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸುಧಾಕರನ್ ತಿಳಿಸಿರುವರು. ಪ್ರಶ್ನಿಸಿದ ನಂತರ ಆತ್ಮ ವಿಶ್ವಾಸವಿದೆ ಎಂದಿರುವರು.