ಮಂಜೇಶ್ವರ: ಯಂಗ್ ಮೆನ್ಸ್ ಅಸೋಸಿಯೇಶನ್ಸ್ ಮಚ್ಚಂಪಾಡಿ ಇದರ ವತಿಯಿಂದ ಬಡಾಜೆ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕಗಳ ವಿತರಣೆ ಜರಗಿತು. ವಾರ್ಡ್ ಸದಸ್ಯ ಯಾದವ ಬಡಾಜೆ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮೊಯಿದ್ದೀನ್ ಕುಂಞ ಪುಸ್ತಕ ವಿತರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಖಲೀಲ್, ಕಬೀರ್, ಯಾಕೂಬ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಸ್ವಾಗತಿಸಿ, ಶಿವಪ್ರಸಾದ್ ರಾವ್ ವಂದಿಸಿದರು. ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.