HEALTH TIPS

ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತನ್ನನ್ನೇ ತಾನು ಮದುವೆಯಾಗಿದ್ದ ಯುವತಿ!

               ಹಮದಾಬಾದ್‌ಸ್ವಯಂ ವಿವಾಹ ಅಥವಾ ತನ್ನನ್ನೇ ತಾನು ಮದುವೆಯಾಗಿ (sologamy) ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್‌ನ ವಡೋದರಾದ ಮಹಿಳೆ ಕ್ಷಮಾ ಬಿಂದು (24) ಇದೀಗ ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

              ಈ ಪ್ರಯುಕ್ತ ಅವರು ಇನ್‌ಸ್ಟಾಗ್ರಾಂನಲ್ಲಿ ಒಂದು ವರ್ಷದ ಪಯಣದ ಶಾರ್ಟ್ ವಿಡಿಯೊ ಒಂದನ್ನು ಹಂಚಿಕೊಂಡು Happy wedding anniversary ಎಂದು ತಮಗೆ ತಾವೇ ಶುಭಾಶಯ ಹೇಳಿಕೊಂಡಿದ್ದಾರೆ.

               ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಅವರು ಏಕಾಂಗಿಯಾಗಿ ಪ್ರವಾಸ ಮಾಡಿ ಅದರ ವಿಡಿಯೊ-ಫೋಟೊಗಳನ್ನು ಹಂಚಿಕೊಂಡಿದ್ದಾರೆ.

               2022 ಜೂನ್ 9ರಂದು ಗುಜರಾತ್‌ನ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ, ವಡೋದರಾದ ಕಲ್ಯಾಣ ಮಂಟಪದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸ್ವ-ವಿವಾಹವಾಗಿದ್ದರು. ಮಧುಚಂದ್ರಕ್ಕೆ ಗೋವಾಕ್ಕೆ ಹೋಗಿದ್ದರು.

                 ಸ್ಥಳೀಯ ರಾಜಕಾರಣಿಗಳು ಮತ್ತು ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಈ ವಿವಾಹ ಹೆಚ್ಚು ಸದ್ದು ಮಾಡಿತ್ತು.

                   ಕ್ಷಮಾ ಬಿಂದು ಅವರು ತನ್ನನ್ನೇ ತಾನು ಮದುವೆಯಾಗಿರುವ ಭಾರತದ ಪ್ರಥಮ ಮಹಿಳೆ ಎನಿಸಿಕೊಂಡಿದ್ದಾರೆ. ಕ್ಷಮಾ ತಮ್ಮನ್ನು ಡಿಜಿಟಲ್ ಕ್ರಿಯೇಟರ್ ಎಂದು ಹೇಳಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries