ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಎರಿಯಾಲ್ ಪೇಟೆಯಲ್ಲಿ ಅಂಡರ್‍ಪಾಸ್ ರಸ್ತೆ ವ್ಯವಸ್ತೆ ಅಳವಡಿಸುವಂತೆ ಕ್ರಿಯಾ ಸಮಿತಿ ನಡೆಸಿಕೊಮಡು ಬರುತ್ತಿರುವ ಅನಿರ್ದಿಷ್ಟಾವಧಿ ಧರಣಿ ಕಾರ್ಯಕ್ರಮದ ಅಂಗವಾಗಿ ಸಂಜೆ ಧರಣಿ ಎರಿಯಾಲ್ ಪೇಟೆಯಲ್ಲಿ ಜರುಗಿತು. ನೂತನ ಷಟ್ಪಥ ರಸ್ತೆ ಸಂಧಿಸುವ ಏರಿಯಾಲ್ ಪೇಟೆಯಲ್ಲಿ ಅಂಡರ್ ಪಾಸ್ ನಿರ್ಮಾಣಕಾರ್ಯ ತುರ್ತು ಕಾರ್ಯಗಳಲ್ಲಿ ಒಂದಾಗಿದ್ದು, ಈ ಪ್ರದೇಶದಲ್ಲೇ ಅಂಡರ್ ಪ್ಯಾಸೇಜ್ ತೆರೆಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಧರಣಿ ಉದ್ಘಾಟಿಸಿದರು. ರಾಷ್ಟ್ರೀಯ ಹೆದ್ದಾರಿ ಅಭಿವೃದಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಬಿ.ಕುಞËಮು ಅಧ್ಯಕ್ಷತೆ ವಹಿಸಿದ್ದರು
ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪ್ರಮೀಳಾ ಮಾಜಲ್, ಚಂದ್ರಶೇಖರನ್, ಸುಕುಮಾರ್ ಕುದ್ರೆಪ್ಪಾಡಿ, ಅಬ್ದುಲ್ಲಾಎರಿಯಾಲ್, ಸಂಪತ್ ಕುಮಾರ್, ನಿಸಾರ್ ಕುಳಂಗರ, ರಫಿ ಎರಿಯಾಲ್, ಸುರೇಂದ್ರ ನಾಯ್ಕ್, ಹರ್ಷವರ್ಧನ್, ಅನ್ವರ್ ಚೇರಂಗೈ, ಎ.ಎ.ಜಲೀಲ್, ಶ್ರೀನಿವಾಸ, ಕೃಷ್ಣ ಪಾಟಾಳಿ, ರಾಜೇಶ್, ಮಾಧವನ್, ಎ.ಕೆ ಶಾಫಿ, ಬಿ. ಎಂ.ಖಾದರ್, ಕೆ. ಬಿ.ಅಬೂಬಕರ್, ಬಿ.ಎ.ಅಬೂಬಕರ್ ಉಪಸ್ಥೀತರಿದ್ದರು.
ಹೈದರ್ ಕುಳಂಗರ ಸ್ವಾಗತಿಸಿದರು. ಹನೀಫ್ ಚೇರಂಗೈ ವಂದಿಸಿದರು. ಎರಿಯಾಲ್ ಪ್ರದೇಶದಲ್ಲಿ ಅಂಡರ್ ಪಾಸ್ ಒದಗಿಸಿಕೊಡುವಂತೆ ಕಳೆದ ಒಂದು ವರ್ಷದಿಂದ ಸ್ಥಳೀಯರು ಕ್ರಿಯಾಸಮಿತಿ ರಚಿಸಿಕೊಂಡು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆರು ಪಥಗಳೊಂದಿಗೆ ಎರಿಯಲ್ ಮೂಲಕ ಹಾದುಹೋಗುವ ರಸ್ತೆಯು ಪ್ರಸಕ್ತ ಭೂಮಿತಿಯಿಂದ ಐದಾರು ಅಡಿ ಎತ್ತರದಲ್ಲಿದ್ದು, ಅದರ ಎರಡೂ ಬದಿಗಳಲ್ಲಿ ಬೃಹತ್ ಕಾಂಕ್ರೀಟ್ ಗೋಡೆ ನಿರ್ಮಿಸಿ ಏರಿಯಲ್ ಪೇಟೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಸಂಪರ್ಕವಿಲ್ಲದಂತೆ ಮಾಡಲಾಗಿದೆ. ರಸ್ತೆ ಎರಡೂ ಅಂಚಿನಲ್ಲಿ ಶಾಲೆಗಳು, ಮದರಸಾಗಳು, ಪ್ರಾರ್ಥನಾ ಸ್ಥಳಗಳು, ಗ್ರಾಮ ಕಚೇರಿ, ಕೃಷಿ ಭವನ, ಸಿಪಿಸಿಆರ್‍ಐ, ಅಂಗನವಾಡಿ, ಪಡಿತರ ಅಂಗಡಿಗಳು ಮತ್ತು ಅನೇಕ ವಾಣಿಜ್ಯ ಸಂಸ್ಥೆಗಳು ಇದ್ದು, ಜನರು ಇನ್ನೊಂದು ಬದಿಗೆ ಕಿಲೋಮೀಟರ್ ವರೆಗೂ ನಡೆದು ಹೋಗಬೇಕಾಗಿದೆ. ಕೇಂದ್ರೀಯ ತೋಟಗಾರಿಕೇ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ)ಗೆ ಅಧ್ಯಯನಕ್ಕಾಗಿ ವಿವಿಧ ಪ್ರದೇಶಗಳಿಂದ ಆಗಮಿಸುತ್ತಿರುವುದಲ್ಲದೆ, ಇಲ್ಲಿಂದ ವಿವಿಧೆಡೆ ವ್ಯಾಸಂಗಕ್ಕಾಗಿ ಮತ್ತು ಕೆಲಸಕ್ಕಾಗಿ ಪ್ರಯಾಣಿಸುವವರು ಬಸ್ ಬೇ ಇಲ್ಲದಿರುವುದರಿಂದ ಬಸ್‍ನಿಂದ ಇಳಿಯಲು ಮತ್ತು ಹತ್ತಲೂ ಕಷ್ಟಪಡುತ್ತಿದ್ದಾರೆ.