ತಿರುವನಂತಪುರಂ: ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ನಾಳೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಸೇವಾ ನಿವೃತ್ತಿಯ ಭಾಗವಾಗಿ ಕೇರಳ ಪೋಲೀಸ್‍ನಿಂದ ಅಧಿಕೃತ ಬೀಳ್ಕೊಡುಗೆ ನಡೆಯಲಿದೆ.
ಎರಡು ವರ್ಷಗಳ ಕಾಲ ಪೋಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವುದು ಸೇರಿದಂತೆ ಸೇವೆಯಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ ನಂತರ ಡಿಜಿಪಿ ಅನಿಲಕಾಂತ್ ಅವರು ನಿವೃತ್ತಿಯಾಗುತ್ತಿದ್ದಾರೆ. ಕೇರಳ ಪೋಲೀಸ್ ಇಲಾಖೆಯಲ್ಲಿ ಮುಖ್ಯಸ್ಥ ಹುದ್ದೆ ಅಲಂಕರಿಸಿದ ದಲಿತ ಸಮುದಾಯದ ಮೊದಲ ಅಧಿಕಾರಿ ಎಂಬ ಬಿರುದು ಕೂಡ ಅನಿಲ್‍ಕಾಂತ್ ಅವರದ್ದಾಗಿದೆ.
ಅನಿಲ್ ಕಾಂತ್ ಅವರ ಅಧಿಕೃತ ವೃತ್ತಿಜೀವನವು 1988 ರ ಬ್ಯಾಚ್‍ನಲ್ಲಿ ಕೇರಳ ಕೇಡರ್‍ನಲ್ಲಿ ಭಾರತೀಯ ಪೋಲೀಸ್ ಸೇವೆಗೆ ಸೇರಿದಾಗ ಪ್ರಾರಂಭವಾಯಿತು. ವಯನಾಡಿನಲ್ಲಿ ಐಪಿಎಸ್ ಆಗಿ ಸೇವೆ ಆರಂಭಿಸಿದರು. ನಂತರ ತಿರುವನಂತಪುರಂ ಗ್ರಾಮಾಂತರ ಮತ್ತು ರೈಲ್ವೆಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ನವದೆಹಲಿ ಮತ್ತು ಶಿಲ್ಲಾಂಗ್‍ನಲ್ಲಿ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಹಿಂದಿರುಗಿದ ನಂತರ, ಅವರು ಪೋಲೀಸ್ ತರಬೇತಿ ಕಾಲೇಜಿನ ಪ್ರಾಂಶುಪಾಲರಾದರು. ನಂತರ ಅವರು ಕೊಚ್ಚಿ ನಗರ ಪೋಲೀಸ್ ಆಯುಕ್ತರಾಗಿ ಮತ್ತು ಮಲಪ್ಪುರಂ ಮತ್ತು ಎರ್ನಾಕುಳಂ ಕ್ರೈಂ ಬ್ರಾಂಚ್ ಎಸ್ಪಿಯಾಗಿ ಸೇವೆ ಸಲ್ಲಿಸಿದರು.
ಡಿಐಜಿ ವಿಶೇಷ ವಿಭಾಗ, ತಿರುವನಂತಪುರಂ ರೇಂಜ್ ಮತ್ತು ಅಪರಾಧ ವಿಭಾಗದಲ್ಲಿ ಐಜಿಯಾಗಿಯೂ ಕೆಲಸ ಮಾಡಿದ್ದಾರೆ. ಮಧ್ಯಂತರದಲ್ಲಿ ಹೆಚ್ಚುವರಿ ಅಬಕಾರಿ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ಅವರು ಎಡಿಜಿಪಿಯಾಗಿ ಬಡ್ತಿ ಪಡೆದು ಕೇರಳ ಪೋಲೀಸ್ ವಸತಿ ನಿರ್ಮಾಣ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಎಡಿಜಿಪಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅನಿಲ್ ಕಾಂತ್ ಅವರು ರಸ್ತೆ ಸುರಕ್ಷತಾ ಆಯುಕ್ತ ಹುದ್ದೆಯಿಂದ ರಾಜ್ಯ ಪೋಲೀಸ್ ಮುಖ್ಯಸ್ಥರ ಹುದ್ದೆಗೆ ಏರಿದರು. ಅವರು ಜೈಲು ಮುಖ್ಯಸ್ಥ, ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಮತ್ತು ಸಾರಿಗೆ ಆಯುಕ್ತರ ಹುದ್ದೆಗಳಲ್ಲಿಯೂ ಮಿಂಚಿದ್ದರು. ವಿಶಿಷ್ಟ ಸೇವೆ ಮತ್ತು ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೋಲೀಸ್ ಪದಕವನ್ನು ಪಡೆದಿದ್ದಾರೆ. 64 ನೇ ಅಖಿಲ ಭಾರತ ಪೋಲೀಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ 2018 ರಲ್ಲಿ ಶ್ಲಾಘನೆ ಮತ್ತು ಗೌರವ ಬ್ಯಾಡ್ ಪಡೆದಿದ್ದರ್ಜು. ಅನಿಲ್ ಕಾಂತ್ ಬೆಳಿಗ್ಗಿನ ಜಾಗಿಂಗ್ ಓಟಕ್ಕಾಗಿ ಆಗಾಗ್ಗೆ ಸುದಿಯಾಗಿದ್ದಾರೆ. ರಾಜ್ಯ ಪೆÇಲೀಸ್ ಮುಖ್ಯಸ್ಥರಾಗಿ ನಿವೃತ್ತರಾಗುತ್ತಿರುವ ಅನಿಲಕಾಂತ್ ಅವರಿಗೆ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು. ಡಿಜಿಪಿ ಮತ್ತು ಅವರ ಸಹೋದ್ಯೋಗಿಗಳು ಪೋಲೀಸ್ ಕೇಂದ್ರ ಕಚೇರಿಯಿಂದ ಚಂದ್ರಶೇಖರನ್ ನಾಯರ್ ಸ್ಟೇಡಿಯಂಗೆ ನಿತ್ಯ ಓಡುವ ಮೂಲಕ ಗಮನ ಸೆಳೆದಿದ್ದರು.