ಚೆನ್ನೈ : ಆಳ ಸಮುದ್ರದ ರಹಸ್ಯ ಭೇದಿಸುವ ಸಬ್‌ಮರ್ಸಿಬಲ್ ವೆಹಿಕಲ್ (ಸಮುದ್ರದಡಿ ಸಂಚರಿಸುವ ನೌಕೆ) ನಿರ್ಮಾಣ ಕಾರ್ಯವು ಭರದಿಂದ ನಡೆಯುತ್ತಿದ್ದು, ಶೀಘ್ರವೇ ಸಮುದ್ರಯಾನ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಕೇಂದ್ರ ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ವಿಶ್ವ ಸಾಗರ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಈ ಅಭಿಯಾನ ಸಂಬಂಧ ಕೆಲಸ ಮಾಡುತ್ತಿದೆ. ಈ ನೌಕೆಗೆ 'ಮತ್ಸ್ಯ 6000' ಎಂದು ಹೆಸರಿಡಲಾಗಿದೆ. ಇದರ ಮೂಲಕ ಮೂವರು ತಜ್ಞರು ಸಾಗರದ ಆರು ಸಾವಿರ ಮೀಟರ್ ಆಳಕ್ಕೆ ತೆರಳಿ ಜೈವಿಕ ವೈವಿಧ್ಯದ ಮೌಲ್ಯಮಾಪನ ಮಾಡಲಿದ್ದಾರೆ ಎಂದರು.
ನೌಕೆಯ ನಿರ್ಮಾಣ ಕಾರ್ಯದಲ್ಲಿ ವಿಜ್ಞಾನಿಗಳು ಕಾರ್ಯನಿರತರಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದರು.