ಕಾಸರಗೋಡು: ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಜಾರಿಗೊಳಿಸಿರುವ 'ಊರ ÀiÁವು ಮತ್ತು ನೆರಳು' ಯೋಜನೆ ಮತ್ತು ಶಾಲಾ ನರ್ಸರಿ ಯೋಜನೆ, ಪಿಲಿಕೋಡ್ ಸಿ.ಕೆ.ಎನ್ ಸ್ಮಾರಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಸಕ ಎಂ.ರಾಜಗೋಪಾಲನ್ ಸ್ಥಳೀಯ ಮಾವಿನ ಗಿಡಗಳನ್ನು ನೆಟ್ಟು ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ವಿವಿಧ ಕಾರಣಗಳಿಂದಾಗಿ ವಿನಾಶದ ಅಂಚಿಗೆ ತಲುಪಿರುವ ಊರ ಮಾವಿನ ತಳಿಗಳಿಗೆ ಪರ್ಯಾಯವಾಗಿ ಇತರ ಹಣ್ಣುಗಳು ಹಾಗೂ ವಿವಿಧ ಪ್ರಬೇದಗಳ ಸಸ್ಯಗಳನ್ನು ನೆಟ್ಟುಬೆಳೆಸುವ ಮೂಲಕ ಸಾಮಾಜಿಕ ಅರಣ್ಯದ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ದಾನೇಶ್ ಕುಮಾರಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ತಾ.ಪಂ.ಅಧ್ಯಕ್ಷೆ ಕೆ.ಸುನೀಲ ಕುಮಾರಿ, ಎಸ್.ಎಂ.ಸಿ. ಅಧ್ಯಕ್ಷ ಪಿ.ಸುಧಾಕರನ್, ವಿಭಾಗೀಯ ಅರಣ್ಯಾಧಿಕಾರಿಗಳಾದ ಎನ್.ವಿ.ಸತ್ಯನ್, ಎಂ.ಚಂದ್ರನ್, ಪಿ.ಸಿ.ಯಶೋದಾ, ಫಾರೆಸ್ಟ್ ಕ್ಲಬ್ ಗ್ರೀನ್ ಸಂಯೋಜಕಿ ಎಂ.ತುಳಸಿ ಉಪಸ್ಥಿತರಿದ್ದರು. ನಿರ್ದೇಶಕಿ ಎಂ. ರೇಷ್ಮಾ ಸ್ವಾಗತಿಸಿದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಎನ್. ಅಬ್ದುಲ್ ಲತೀಫ್ ವಂದಿಸಿದರು.